ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಗ್‌–21ಅನ್ನು ಎಂದಿಗೆ ಸೇವೆಯಿಂದ ತೆಗೆದುಹಾಕಲಾಗುತ್ತದೆ?: ಸಂಸದ ವರುಣ್‌ ಗಾಂಧಿ

Last Updated 29 ಜುಲೈ 2022, 13:59 IST
ಅಕ್ಷರ ಗಾತ್ರ

ನವದೆಹಲಿ: ಮಿಗ್‌–21 ತರಬೇತಿ ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ಗುರುವಾರ ಹಾರಾಟವೇಳೆಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಬಿಜೆಪಿ ಸಂಸದ ವರುಣ್‌ ಗಾಂಧಿ, ಮಿಗ್‌–21 ವಿಮಾನಗಳನ್ನು ‘ಹಾರುವ ಶವಪೆಟ್ಟಿಗೆ’ ಎಂದು ಕರೆದಿದ್ದಾರೆ. ‘ಈ ವಿಮಾನವನ್ನು ಸೇವೆಯಿಂದ ಎಂದಿಗೆ ತೆಗೆದು ಹಾಕಲಾಗುವುದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬಡ್‌ಮೇರ್‌ನಲ್ಲಿ ಗುರುವಾರ ರಾತ್ರಿ ನಡೆದ ಘಟನೆಯಿಂದ ಇಡೀ ದೇಶ ಭಯ ಮತ್ತು ಬೇಸರದಲ್ಲಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಮಿಗ್‌–21 ವಿಮಾನಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಈ ವಿಮಾನವು ಇಲ್ಲಿಯ ವರೆಗೆ 200 ಪೈಲೆಟ್‌ಗಳ ಬಲಿ ಪಡೆದಿದೆ’ ಎಂದು ವರುಣ್‌ ಗಾಂಧಿ ಶುಕ್ರವಾರ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

‘ದೇಶದ ಸಂಸತ್ತು ಈ ಬಗ್ಗೆ ಯೋಚಿಸಬೇಕಿದೆ. ನಾವು ನಮ್ಮ ಮಕ್ಕಳನ್ನು ಈ ವಿಮಾನದಲ್ಲಿ ಹಾರಾಡಲು ಬಿಡಬಹುದೇ?’ ಎಂದು ಪ್ರಶ್ನಿಸಿದ್ದಾರೆ.

ಘಟನೆ ಏನು?: ಭಾರತೀಯ ವಾಯುಪಡೆಯ ಇಬ್ಬರು ಪೈಲೆಟ್‌ಗಳು ಗುರುವಾರ ರಾತ್ರಿಬಡ್‌ಮೇರ್‌ ಸಮೀಪ ಮಿಗ್‌–21 ತರಬೇತಿ ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ.ವಿಂಗ್‌ ಕಮಾಂಡರ್‌ ಎಂ.ರಾಣಾ ಮತ್ತು ಫೈಟ್‌ ಲೆಫ್ಟಿನೆಂಟ್‌ ಅದ್ವಿತೀಯ ಬಾಲ್‌ ಮೃತಪಟ್ಟವರು.ಉತ್ತರ್‌ಲಾಯಿ ವಾಯು ನೆಲೆಯಿಂದ ವಿಮಾನವು ಹೊರಟಿತ್ತು. ರಾತ್ರಿ 9.10ರ ಸುಮಾರಿಗೆ ಅಪಘಾತ ಸಂಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT