ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಪಡೆದ ವಿದೇಶಿ ನೆರವಿನಲ್ಲಿ ಪಾರದರ್ಶಕತೆ ಏಕಿಲ್ಲ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದಿಂದ ಉತ್ತರವನ್ನು ಬಯಸಿದ್ದಾರೆ.

ಕೋವಿಡ್ ವಿದೇಶಿ ನೆರವಿಗೆ ಸಂಬಂಧಪಟ್ಟಂತೆರಾಹುಲ್ ಗಾಂಧಿ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. 'ಭಾರತ ಯಾವೆಲ್ಲ ಸರಬರಾಜುಗಳನ್ನು ಗಿಟ್ಟಿಸಿಕೊಂಡಿದೆ? ಅದು ಎಲ್ಲಿದೆ? ಅದರಿಂದ ಯಾರುಪ್ರಯೋಜನ ಪಡೆಯುತ್ತಿದ್ದಾರೆ? ಅವುಗಳನ್ನು ರಾಜ್ಯಗಳಿಗೆ ಹೇಗೆ ಹಂಚಲಾಗುತ್ತಿದೆ? ಪಾರದರ್ಶಕತೆ ಏಕಿಲ್ಲ? ಭಾರತ ಸರ್ಕಾರವೇ, ನಿಮ್ಮ ಬಳಿ ಉತ್ತರವಿದೆಯೇ' ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ವಿದೇಶದಿಂದ ಗಿಟ್ಟಿಸಿದ ಕೋವಿಡ್ ನೆರವಿನ ಬಗ್ಗೆ ಕಾಂಗ್ರೆಸ್ ಪಾರದರ್ಶಕತೆಯನ್ನು ಬಯಸುತ್ತಿದೆ. ಅದನ್ನು ಎಲ್ಲಿಂದ ಮತ್ತು ಹೇಗೆ ಬಳಸಲಾಗಿದೆ ಎಂಬುದರ ಕುರಿತು ದೇಶದ ಜನತೆಗೆ ವಿವರವನ್ನು ನೀಡುವಂತೆ ಸರ್ಕಾರವನ್ನು ಬಯಸಿದೆ.

ಇದನ್ನೂ ಓದಿ:ಉತ್ತರಪ್ರದೇಶದಲ್ಲಿ ಆಮ್ಲಜನಕ ಕೊರತೆಯಿಂದ ಕೋವಿಡ್ ರೋಗಿಗಳ ಸಾವು: ಪ್ರಿಯಾಂಕಾ

ಮಗದೊಂದು ಟ್ವೀಟ್‌ನಲ್ಲಿ ಕೋವಿಡ್ ಬಿಕ್ಕಟ್ಟನ್ನು ನಿಯಂತ್ರಿಸುವಲ್ಲಿ ಮತ್ತು ಜನರಿಗೆ ಉದ್ಯೋಗ ನೀಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವೈಫಲ್ಯವನ್ನು ಕಂಡಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

'ಲಸಿಕೆ ಇಲ್ಲ, ಉದ್ಯೋಗವೂ ಇಲ್ಲ. ಜನರು ಕೊರೊನಾ ವೈರಸ್ ತೀವ್ರತೆಯನ್ನು ಎದುರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಸಂಪೂರ್ಣ ವೈಫಲ್ಯವನ್ನು ಅನುಭವಿಸಿದೆ' ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.