ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಮಸೀದಿಗೆ ನುಗ್ಗಿ ಹೊಡೆಯುತ್ತೇವೆ’: ಬಿಜೆಪಿ ಶಾಸಕನ ಹೇಳಿಕೆ; ದೂರು ದಾಖಲು

Published 2 ಸೆಪ್ಟೆಂಬರ್ 2024, 14:04 IST
Last Updated 2 ಸೆಪ್ಟೆಂಬರ್ 2024, 14:04 IST
ಅಕ್ಷರ ಗಾತ್ರ

ಮುಂಬೈ: ಮುಸ್ಲಿಮರನ್ನು ಬೆದರಿಸುವ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಆರೋಪದ ಮೇಲೆ ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್ ಕುಮಾರ್ ರಾಣೆ ಅವರ ವಿರುದ್ಧ ಅಹಮ್ಮದ್‌ನಗರ ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಹಾಂತ ರಾಮಗಿರಿ ಮಹಾರಾಜ್ ಪರವಾಗಿ ಶ್ರೀರಾಮಪುರ ಮತ್ತು ಟೋಪಖಾನಾದಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದ ರಾಣೆ, ಸ್ವಾಮೀಜಿ ರಾಮಗಿರಿ ಮಹಾರಾಜ್ ವಿರುದ್ಧವಾಗಿ ಯಾರಾದರೂ ಏನಾದರು ಹೇಳಿದರೆ, ‘ನಾವು ನಿಮ್ಮ ಮಸೀದಿಗೆ ನುಗ್ಗಿ ಒಬ್ಬೊಬ್ಬರನ್ನೇ ಹಿಡಿದು ಥಳಿಸುತ್ತೇವೆ. ಇದನ್ನು ಮನಸಿನಲ್ಲಿಟ್ಟುಕೊಳ್ಳಿ’ಎಂದು ರಾಣೆ ಹೇಳಿದ್ದಾರೆನ್ನಲಾದ ವಿಡಿಯೊ ಹರಿದಾಡುತ್ತಿದೆ.

ಈ ಸಂಬಂಧ ಶ್ರೀರಾಮಪುರ ಮತ್ತು ಟೋಪಖಾನಾ ಪೊಲೀಸ್ ಠಾಣೆಯಲ್ಲಿ ರಾಣೆ ವಿರುದ್ಧ ಎರಡು ಎಫ್‌ಐಆರ್ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಎಐಎಂಐಎಂ ವಕ್ತಾರ ವಾರಿಸ್ ಪಠಾಣ್, ರಾಣೆಯನ್ನು ಬಂಧಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರನ್ನು ಒತ್ತಾಯಿಸಿದ್ದಾರೆ.

‘ತಮ್ಮ ಸಂಪೂರ್ಣ ಭಾಷಣದಲ್ಲಿ ರಾಣೆ ಮುಸ್ಲಿಮರ ವಿರುದ್ಧ ದ್ವೇಷ ಹರಡುತ್ತಿದ್ದಾರೆ. ಇದೊಂದು ಪ್ರಚೋದನಕಾರಿ ದ್ವೇಷ ಭಾಷಣ, ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಮಹಾರಾಷ್ಟ್ರದಲ್ಲಿ ಕೋಮು ಹಿಂಸಾಚಾರ ಸೃಷ್ಟಿಗೆ ಯತ್ನಿಸುತ್ತಿದೆ’ಎಂದು ಪಠಾಣ್ ದೂರಿದ್ದಾರೆ.

ಪ್ರವಾದಿ ಮೊಹಮ್ಮದ್‌, ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ರಾಮಗಿರಿ ಮಹಾರಾಜ್ ವಿರುದ್ಧ ಮಹಾರಾಷ್ಟ್ರದ ಹಲವೆಡೆ ಪ್ರಕರಣಗಳು ದಾಖಲಾಗಿವೆ. ಅವರ ಬಂಧನಕ್ಕೆ ಮುಸ್ಲಿಂ ನಾಯಕರು ಒತ್ತಾಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT