ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿ, ಬಿಸಿ ಸಾರು ಎರಚಿ ಕ್ರೌರ್ಯ

Published 7 ಫೆಬ್ರುವರಿ 2024, 4:46 IST
Last Updated 7 ಫೆಬ್ರುವರಿ 2024, 4:46 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಮಹಿಳೆ ಮೇಲೆ ಆಕೆಯ ಸ್ನೇಹಿತನೇ ವಾರಗಳ ಕಾಲ ಅತ್ಯಾಚಾರ ಎಸಗಿ, ಬಿಸಿ ತೊಗರಿ ಸಾರು ಎರಚಿ ಹಿಂಸೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಆರೋಪಿ ಪಾರಸ್‌ (28) ಎಂಬಾತನನ್ನು ಬಂಧಿಸಲಾಗಿದ್ದು, ಅತ್ಯಾಚಾರ ಹಾಗೂ ಐಪಿಸಿಯ ಇತರ ಸೆಕ್ಷನ್‌ಗಳಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಸಂತ್ರಸ್ತೆ ಹಾಗೂ ಆರೋಪಿ ದಕ್ಷಿಣ ದೆಹಲಿಯ ನೆಬ್‌ ಸರಾಯ್ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಮಹಿಳೆಗೆ ಆರೋಪಿಯು ಹೊಡೆಯುತ್ತಿದ್ದಾನೆ ಎಂದು ಜ.30ರಂದು ಪೊಲೀಸ್‌ ನಿಯಂತ್ರಣ ಕೊಠಡಿಗೆ ದೂರು ಬಂದಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿ, ಏಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಯ ದೇಹದ ಮೇಲೆ 20 ಗಾಯದ ಗುರುತುಗಳಿದ್ದವು, ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾನು ಡಾರ್ಜಿಲಿಂಗ್‌ ಮೂಲದವಳಾಗಿದ್ದು, ‍ಫೋನ್‌ ಮುಖಾಂತರ ಆರೋಪಿ ಪರಿಚಯವಾಗಿದ್ದ. 3–4 ತಿಂಗಳಿನಿಂದ ಸಂಪರ್ಕದಲ್ಲಿದ್ದ ಎಂದು ಸಂತ್ರಸ್ತೆ ವಿಚಾರಣೆ ವೇಳೆ ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತ್ತು. ಬೆಂಗಳೂರಿಗೆ ತೆರಳುವ ದಾರಿ ಮಧ್ಯೆ ದೆಹಲಿಯಲ್ಲಿ ಇಳಿದು ಪಾರಸ್‌ನನ್ನು ಭೇಟಿಯಾಗಿದ್ದಳು. ಬೆಂಗಳೂರಿಗೆ ಹೋಗುವುದು ಬೇಡ. ಇಲ್ಲಿಯೇ ಕೆಲಸ ಹುಡುಕಲು ಸಹಾಯ ಮಾಡುತ್ತೇನೆ ಎಂದು ಆಕೆಯನ್ನು ಮನವೊಲಿಸಿ, ರಾಜು ಪಾರ್ಕ್ ಪ್ರದೇಶದಲ್ಲಿ ಬಾಡಿಗೆ ಮನೆ ಪಡೆದುಕೊಂಡಿದ್ದರು.

ದಿನಗಳೆದಂತೆ ಆಕೆಯ ಮೇಲೆ ಪಾರಸ್‌ ಹಲ್ಲೆ ನಡೆಸಿದಲ್ಲದೆ, ಲೈಂಗಿಕವಾಗಿಯೂ ಪೀಡಿಸಿದ್ದ. ಬಿಸಿ ಬೇಳೆ ಸಾರನ್ನೂ ಎರಚಿದ್ದ ಎಂದು ಸಂತ್ರಸ್ತೆ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆಕೆಯ ದೂರಿನ ಅನ್ವಯ ಜ.30ರಂದು ದೂರು ದಾಖಲಿಸಿಕೊಂಡು, ಫೆ. 2ರಂದು ಪಾರಸ್‌ನಲ್ಲಿ ಬಂಧಿಸಿದ್ದಾರೆ.

ಪಾರಸ್‌ ಮೂಲತಃ ಉತ್ತರಾಖಂಡ್‌ನವನಾಗಿದ್ದು, ಹೋಟೆಲ್‌ ಒಂದರಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT