ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥರಾಗಿ ಮುಂದುವರಿಯಲು ಬಯಸಿರುವ ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರಿಗೆ ತುಂಬಾ ವಯಸ್ಸಾಗಿದೆ ಎಂದು ಹೇಳಿರುವ ಅಜಿತ್ ಪವಾರ್, ನಿವೃತ್ತಿಯ ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಏಕನಾಥ ಶಿಂದೆ ನೇತೃತ್ವದ ಶಿವಸೇನಾ (ಏಕನಾಥ ಶಿಂದೆ ಬಣ) ಹಾಗೂ ಬಿಜೆಪಿ ಮೈತ್ರಿ ಸರ್ಕಾರಕ್ಕೆ ಬೆಂಬಲ ಘೋಷಿಸಿರುವ ಅಜಿತ್ ಪವಾರ್, ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಹೀಗಾಗಿ ಎನ್ಸಿಪಿ ನಾಯಕತ್ವದ ವಿಚಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಪಕ್ಷದ ಮೇಲಿನ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಅಜಿತ್ ಪವಾರ್ ಮತ್ತು ಶರದ್ ಪವಾರ್ ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಬುಧವಾರ ಬೆಂಬಲಿಗರ ಸಭೆ ನಡೆಸಿದ ಅಜಿತ್ ಪವಾರ್ ಅವರು ಶರದ್ ಪವಾರ್ ಅವರನ್ನುದ್ದೇಶಿಸಿ, ನಿಮಗೆ ಈಗಾಗಲೇ 83 ವರ್ಷ. ಬಿಜೆಪಿಯಲ್ಲಿ 75 ವರ್ಷಕ್ಕೆ ನಾಯಕರು ನಿವೃತ್ತರಾಗುತ್ತಾರೆ. ನೀವು ನೂರು ವರ್ಷ ಬದುಕಿ. ಆದರೆ, ಬದುಕಿನ ಹಾದಿಯಲ್ಲಿ ಇರುವ ಕೆಲವು ನಿಲುಗಡೆಗಳನ್ನು ಪರಿಗಣಿಸಿ. ನೀವು ನಮ್ಮ ಪಾಲಿನ ದೇವರು. ನಮಗೆ ಆಶೀರ್ವಾದ ಮಾಡಿ ಅಷ್ಟೇ ಎಂದು ಕೋರಿದ್ದಾರೆ. ಆ ಮೂಲಕ ನಾಯಕತ್ವವನ್ನು ಬಿಟ್ಟುಕೊಡುವಂತೆ ಪರೋಕ್ಷವಾಗಿ ಕೇಳಿದ್ದಾರೆ.

ಮುಂದುವರಿದು, 'ಸರದಿಯಲ್ಲಿರುವ ಪ್ರತಿಯೊಬ್ಬರೂ ತಮ್ಮದೇ ಅವಕಾಶಗಳನ್ನು ಹೊಂದಿರುತ್ತಾರೆ. 25ರಿಂದ 75 ವರ್ಷ ಅಂತ್ಯಂತ ಕ್ರಿಯಾಶೀಲವಾಗಿ ಇರಬಹುದಾದ ವಯಸ್ಸಾಗಿರುತ್ತದೆ' ಎಂದು ಸೂಚ್ಯವಾಗಿ ಹೇಳಿದ್ದಾರೆ.

'ನಮಗೆ ಸಾಹೇಬ್ (ಶರದ್ ಪವಾರ್) ಅವರು ದೈವ ಸಮಾನರು. ಅವರ ಬಗ್ಗೆ ಅಪಾರ ಗೌರವವಿದೆ. ಐಎಎಸ್ ಅಧಿಕಾರಿಗಳು 60ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ. ರಾಜಕೀಯದಲ್ಲಿಯೂ ಬಿಜೆಪಿ ನಾಯಕರು 75 ವರ್ಷಕ್ಕೆ ನಿವೃತ್ತರಾಗುತ್ತಾರೆ. ನೀವು ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಅವರನ್ನು ನಿದರ್ಶನವಾಗಿ ಕಾಣಬಹುದು' ಎಂದು ಕಿವಿಮಾತು ಹೇಳಿದ್ದಾರೆ.

'ನಿಮಗೀಗ 83 ವರ್ಷವಾಯಿತು, ನೀವು ನಿಲ್ಲುವುದಿಲ್ಲವೇ? ನಮಗೆ ನಿಮ್ಮ ಆಶೀರ್ವಾದ ನೀಡಿ. ನಾವು ನಿಮ್ಮ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ' ಎಂದು ಹೇಳಿದ್ದಾರೆ.

ಶರದ್ ಪವಾರ್ ಅವರು ಮೇ ತಿಂಗಳಲ್ಲಿ ಪಕ್ಷದ ಮುಖ್ಯಸ್ಥ ಸ್ಥಾನ ತ್ಯಜಿಸುವುದಾಗಿ ಘೋಷಿಸಿದ್ದರು. ಆದರೆ, ಕೆಲದಿನಗಳ ಬಳಿಕ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದರು. ಈ ಕುರಿತು ಮಾತನಾಡಿರುವ ಅಜಿತ್, 'ನಿರ್ಧಾರವನ್ನು ಹಿಂಪಡೆಯಲು ನೀವು ಬಯಸಿದ್ದಿರಿ ಎಂದಾದರೆ ರಾಜೀನಾಮೆ ನೀಡಿದ್ದಾದರೂ ಏಕೆ? ಇದನ್ನು ವಿವರಿಸುವಂತೆ ನಾನು ಸಹೋದರಿ ಸುಪ್ರಿಯಾ ಸುಳೆ ಅವರಿಗೂ ಕೇಳಿದ್ದೆ' ಎಂದಿದ್ದಾರೆ.

ಹಾಗೆಯೇ 'ಶರದ್ ಪವಾರ್ ತುಂಬಾ ಹಠಮಾರಿ' ಎಂದು ಕುಟುಕಿರುವ ಅಜಿತ್, '2014ರ ವಿಧಾನಸಭೆ ಚುನಾವಣೆ ಬಳಿಕ ಎನ್ಸಿಪಿಯು ಬಿಜೆಪಿಗೆ ಬೆಂಬಲ ನೀಡಿದ್ದೇಕೆ?' ಎಂದು ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವ ಹಂಬಲವನ್ನೂ ವ್ಯಕ್ತಪಡಿಸಿದ್ದಾರೆ.

ಪಕ್ಷಾಂತರ ನಿಷೇಧ ಕಾಯ್ದೆಯ ತೂಗುಕತ್ತಿಯಿಂದ ಪಾರಾಗಲು ಅಜಿತ್ ಪವಾರ್ ಬಣಕ್ಕೆ ಕನಿಷ್ಠ 36 ಶಾಸಕರ ಬೆಂಬಲ ಅಗತ್ಯ. ವಿಧಾನಸಭೆಯಲ್ಲಿ ಎನ್ಸಿಪಿ ಬಲ 53 ಆಗಿದೆ.

ನಾನು ಇವತ್ತು ಸ್ವಲ್ಪವೇ ಮಾತನಾಡಿರುವೆ. ರ್ಯಾಲಿಗಳನ್ನು ಆಯೋಜಿಸುವುದಾಗಿ ಈಗ ಹೇಳುತ್ತಿದ್ದೀರಿ. ಹಾಗಾದಲ್ಲಿ ನಾನೂ ಬಹಿರಂಗ ಸಭೆಗಳನ್ನು ಹಮ್ಮಿಕೊಳ್ಳುತ್ತೇನೆ.
–ಅಜಿತ್ ಪವಾರ್, ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.