ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಮ್ಯ ಕಾರ್ತಿಕೇಯನ್‌ಗೆ ನೇಪಾಳ ಪ್ರಧಾನಿ ಅಭಿನಂದನೆ

ಎವರೆಸ್ಟ್‌ ಶಿಖರವನ್ನೇರಿದ ಭಾರತದ ಅತ್ಯಂತ ಕಿರಿಯಳಿಗೆ ‘ಪ್ರಚಂಡ’ ಗೌರವ
Published 29 ಮೇ 2024, 14:31 IST
Last Updated 29 ಮೇ 2024, 14:31 IST
ಅಕ್ಷರ ಗಾತ್ರ

ಕಠ್ಮಂಡು: ‘ಮೌಂಟ್‌ ಎವರೆಸ್ಟ್‌’ ಅನ್ನು ಏರಿದ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಕಾಮ್ಯ ಕಾರ್ತಿಕೇಯನ್‌ ಅವರನ್ನು ನೇಪಾಳ ಪ್ರಧಾನಿ ಪುಷ್ಪ ಕಮಲ್‌ ದಹಲ್‌ ಪ್ರಚಂಡ ಅವರು ಅಭಿನಂದಿಸಿದ್ದಾರೆ.

ಇತಿಹಾಸದಲ್ಲಿಯೇ ಮೊದಲ ಬಾರಿಗೆ 1953ರ ಮೇ 29ರಂದು ನೇಪಾಳದ ತೇನ್‌ಜಿಂಗ್‌ ಹಾಗೂ ನ್ಯೂಜಿಲೆಂಡ್‌ನ ಎಡ್ಮಂಡ್‌ ಹಿಲರಿ ಅವರು ಎವರೆಸ್ಟ್‌ ಶಿಖರವನ್ನು ಯಶಸ್ವಿಯಾಗಿ ಏರಿದ್ದರು. ಇದರ ಸವಿನೆನಪಿನಲ್ಲಿ ಪ್ರತಿವರ್ಷ ಮೇ 29ರಂದು ‘ಅಂತರಾಷ್ಟ್ರೀಯ ಎವರೆಸ್ಟ್‌ ದಿನ’ ಆಚರಿಸಲಾಗುತ್ತದೆ. ಈ ಪ್ರಯುಕ್ತ ನೇಪಾಳದ ಕಠ್ಮಂಡುವಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಪ್ರಚಂಡ ಅವರು ಭಾರತದ ಕಾಮ್ಯ ಕಾರ್ತಿಕೇಯನ್‌ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಪರ್ವಾತಾರೋಹಿಗಳನ್ನು ಸನ್ಮಾನಿಸಿದ್ದಾರೆ.

16 ವರ್ಷ, 9 ತಿಂಗಳ ವಯಸ್ಸಿನ ಕಾಮ್ಯ ಅವರು ಇದೇ ತಿಂಗಳ 20ರಂದು ನೇಪಾಳದ ‘ಔತ್‌ ಕೋಲ್‌’ ಪಾಯಿಂಟ್‌ನಿಂದ ತಮ್ಮ ತಂದೆ ಎಸ್‌.ಕಾರ್ತಿಕೇಯನ್‌ ಅವರೊಂದಿಗೆ ಯಶಸ್ವಿಯಾಗಿ ಎವರೆಸ್ಟ್‌ ಶಿಖರವನ್ನೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT