ಗುವಾಹಟಿ: ಕಳೆದ ತಿಂಗಳು ಮೃತಪಟ್ಟ ಖ್ಯಾತ ಗಾಯಕ ಜುಬೀನ್ ಗರ್ಗ್ ಸಾವಿನ ಬಗ್ಗೆ ನಡೆಯುತ್ತಿರುವ ತನಿಖೆಯ ಭಾಗವಾಗಿ, ಸಿಂಗಪುರ ಪೊಲೀಸ್ ಅಧಿಕಾರಿಗಳು ಅಕ್ಟೋಬರ್ 21ರಂದು ಅಸ್ಸಾಂ ಪೊಲೀಸ್ ತಂಡವನ್ನು ಭೇಟಿ ಮಾಡಲಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಹೇಳಿದ್ದಾರೆ.

ಅದಾಗ್ಯೂ, ಅಸ್ಸಾಂ ಪೊಲೀಸ್ ತಂಡ ಸಿಂಗಪುರಕ್ಕೆ ಹೋಗುತ್ತದೆಯೆ ಅಥವಾ ಇಲ್ಲವೆ ಎಂಬುವುದನ್ನು ಅವರು ಉಲ್ಲೇಖಿಸಿಲ್ಲ.

‘ನಮ್ಮ ಪ್ರೀತಿಯ ಜುಬೀನ್ಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ. ಎಡಿಜಿಪಿ ಮತ್ತು ಎಸ್ಐಟಿ ಮುಖ್ಯಸ್ಥ ಮುನ್ನಾ ಗುಪ್ತಾ ನೇತೃತ್ವದ ಅಸ್ಸಾಂ ಪೊಲೀಸ್ ತಂಡವನ್ನು ಅಕ್ಟೋಬರ್ 21ರಂದು ಸಿಂಗಪುರ ಪೊಲೀಸ್ ಅಧಿಕಾರಿಗಳು ಭೇಟಿ ಮಾಡಲಿದ್ದಾರೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬುಧವಾರ ನವದೆಹಲಿಯಲ್ಲಿ ಭಾರತದಲ್ಲಿನ ಸಿಂಗಪುರ ಹಂಗಾಮಿ ರಾಯಭಾರಿ ಆಲಿಸ್ ಚೆಂಗ್ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ, ಜುಬೀನ್ ಸಾವಿನ ತನಿಖೆಯನ್ನು ಮುಂದುವರಿಸಲು ರಾಜ್ಯದ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಒತ್ತಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.