ನವದೆಹಲಿ: ಎತ್ತಿನಹೊಳೆ ಯೋಜನೆಗಾಗಿ ಪಶ್ಚಿಮ ಘಟ್ಟದ ಜೀವವೈವಿಧ್ಯನಿರ್ಲಕ್ಷಿಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್ ಜಿಟಿ), ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

‘ಯೋಜನೆಯಿಂದ ಪರಿಸರಕ್ಕೆ ಧಕ್ಕೆ ಎದುರಾಗಲಿದೆ’ ಎಂದು ಕೆ.ಎನ್. ಸೋಮಶೇಖರ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸ್ವತಂತ್ರಕುಮಾರ್ ನೇತೃತ್ವದ ಪೀಠವು, ಪಶ್ಚಿಮಘಟ್ಟದ ವಿಚಾರವಾಗಿ ಕೇಂದ್ರ ಸರ್ಕಾರವು ಮೃದುಧೋರಣೆ ತಳೆಯುತ್ತಿರುವುದು ಸರಿಯಲ್ಲ ಎಂದು ತಿಳಿಸಿತಲ್ಲದೆ, ‘ಈ ಕುರಿತು ಸರ್ಕಾರಕ್ಕೆ ಜವಾಬ್ದಾರಿಯೇ ಇದ್ದಂತಿಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿತು.

ಮರಗಳನ್ನು ಕಡಿಯಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಕ್ರಮದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠವು, ಮುಂದಿನ ಬಾರಿಯ ವಿಚಾರಣೆ ಸಂದರ್ಭ ಯೋಜ ನೆಯ ಸಂಪೂರ್ಣ ಮಾಹಿತಿ ಒದಗಿಸ ಬೇಕು ಎಂದು ಎರಡೂ ಸರ್ಕಾರಗಳಿಗೆ ನಿರ್ದೇಶನ ನೀಡಿ, ಡಿಸೆಂಬರ್ 2ಕ್ಕೆ ಪ್ರಕ ರಣದ ವಿಚಾರಣೆ ಮುಂದೂಡಿತು.

ಯೋಜನೆಗಾಗಿ ಒಟ್ಟು 13.90 ಹೆಕ್ಟೆರ್ ಅರಣ್ಯ ಭೂಮಿ ಉಪಯೋಗಿ ಸುತ್ತಿದ್ದು, 4,995 ಮರಗಳನ್ನು ಕಡಿಯುವ ಅಗತ್ಯವಿದೆ ಎಂದು ರಾಜ್ಯ ಸರ್ಕಾರ ತಿಳಿಸುತ್ತಿದ್ದಂತೆಯೇ, ‘ಯೋಜನೆ ಗಾಗಿ ಈಗಾಗಲೇ ಒಟ್ಟು 2,700 ಮರ ಕಡಿಯಲಾಗಿದೆ. ಅದಕ್ಕೆ ಬದಲಾಗಿ ಸಸಿ ನೆಡುವ ಕುರಿತು ಯೋಚಿಸಲಾಗಿದೆಯೇ’ ಎಂದು ನ್ಯಾಯಮೂರ್ತಿಯವರು ಪ್ರಶ್ನಿಸಿ ದರು. ಮರಗಳನ್ನು ಕಡಿದಿರುವುದಕ್ಕೆ ಪ್ರತಿಯಾಗಿ ಪರ್ಯಾಯ ಜಾಗದಲ್ಲಿ ಅದ ಕ್ಕಿಂತ 10ಕ್ಕೂ ಹೆಚ್ಚು ಪಟ್ಟು ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ಅವರು ತಿಳಿಸಿದರು.

ಅರ್ಜಿದಾರರ ಪರ ವಕೀಲರಾದ ಪ್ರಿನ್ಸ್ ಐಸಾಕ್ ಮತ್ತು ರಿತ್ವಿಕಾ ದತ್ತಾ, ಪಶ್ಚಿಮಘಟ್ಟದಲ್ಲಿನ ಜೀವ ವೈವಿಧ್ಯಕ್ಕೆ ಸಾಕಷ್ಟು ಧಕ್ಕೆ ಉಂಟಾಗಲಿದೆ. ಈ ಯೋಜನೆ ಸ್ಥಗಿತಗೊಳಿಸಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.