ನವದೆಹಲಿ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಮಸೂದೆಗೆ ಸಂಬಂಧಿಸಿ ನಿರ್ಧಾರ ತೆಗೆದುಕೊಳ್ಳಲು ರಾಷ್ಟ್ರಪತಿಗಳು ಆಂಧ್ರಪ್ರದೇಶದ ವಿಧಾನಸಭೆಗೆ ಆರು ವಾರಗಳ ಕಾಲಾವಕಾಶ ನೀಡಿದ್ದಾರೆ.

ಮಸೂದೆಗೆ ಅಂಕಿತ ಹಾಕಿರುವ ರಾಷ್ಟ್ರಪತಿಗಳು, ಇದು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಅಂಗೀಕಾರ ವಾಗಬೇಕಿರುವುದರಿಂದ ಬುಧವಾರ ರಾತ್ರಿ ವಾಪಸ್ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಆಂಧ್ರ ಒಡೆಯುವ ಈ ಮಸೂದೆಯನ್ನು ಇದೀಗ ಆಂಧ್ರಪ್ರದೇಶ ವಿಧಾನಸಭೆಗೆ ಕಳುಹಿಸಲಾಗುತ್ತಿದ್ದು, ಈಗಾಗಲೆ ಸ್ಪೀಕರ್ ಎನ್. ಮನೋಹರ್ ಅವರ ಕಚೇರಿಗೆ ಮಾಹಿತಿ ನೀಡಲಾಗಿದೆ. ಆದರೆ ಮಸೂದೆಗೆ ಆಂಧ್ರ ವಿಧಾನಸಭೆ ಅಂಗೀಕಾರ ನೀಡಲಿ ಇಲ್ಲವೆ ಬಿಡಲಿ , ಪ್ರತ್ಯೇಕ ರಾಜ್ಯ ರಚನೆ ವಿಷಯದಲ್ಲಿ ಸಂಸತ್ತು ತಾನು ತೆಗೆದುಕೊಂಡ ನಿರ್ಧಾರ ಅನುಷ್ಠಾನಕ್ಕೆ ತರಲು ತೊಂದರೆ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್ ತಲುಪಿದ ಮಸೂದೆ
ಮಸೂದೆಯ ದಾಖಲೆಗಳನ್ನು ಹೊತ್ತ ವಿಶೇಷ ವಿಮಾನ ಗುರುವಾರ ಸಂಜೆ ಹೈದರಾಬಾದ್ ತಲುಪಿದ್ದು ಕೇಂದ್ರ ಗೃಹ ಸಚಿವಾಲಯದ ಸಿಬ್ಬಂದಿ ಇದನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ತಲುಪಿಸಿದರು.

ಮಸೂದೆ ಹೈದರಾಬಾದ್ ತಲುಪುತ್ತಲೆ ರಾಜಕೀಯ ವಲಯದಲ್ಲಿ ಸಂಚಲನ ಆರಂಭವಾಗಿದ್ದು ವಿವಿಧ ಮುಖಂಡರು ಈ ಕುರಿತು ಪರ, ವಿರೋಧ ಅಭಿ
ಪ್ರಾಯ ಸಂಗ್ರಹಿಸಲು ಓಡಾಡುವುದು ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.