ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಲವು ನಾಟಕೀಯ ಏಳುಬೀಳುಗಳನ್ನು ಕಂಡ 15ನೇ ವಿಧಾನಸಭೆಯ ಕೊನೆಯ ಅಧಿವೇಶನಕ್ಕೆ ಶುಕ್ರವಾರ ತೆರೆಬಿದ್ದಿತು.

ಕಲಾಪದ ಕೊನೆಯಲ್ಲಿ ತಮ್ಮ ನಾಲ್ಕು ವರ್ಷಗಳ ಅವಧಿಯ ಸಿಂಹಾವಲೋಕನ ಮಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗದ್ಗದಿತರಾದರು. ಮಾತು ಹೊರಡದಂತಾಯಿತು. ನೀರು ಕುಡಿದು ಮತ್ತೆ ಸಾವರಿಸಿಕೊಂಡರು. ಹೆಚ್ಚು ಮಾತನಾಡಲಾಗದೇ ಕಲಾಪಕ್ಕೆ ತೆರೆ ಎಳೆದರು.

‘ದೇಶದಲ್ಲಿ ಜನ ಭಾಷೆ, ಜಾತಿ, ರಾಜ್ಯ ಎಂಬ ಸೀಮಿತವಾಗಿ ಯೋಚನೆ ಮಾಡುವ ಸ್ಥಿತಿ ಇದೆ. ಎಲ್ಲಕ್ಕಿಂತ ದೇಶವೇ ಮೊದಲು ಎಂಬ ಭಾವನೆ ಬಂದಾಗ ದೇಶ ಇನ್ನಷ್ಟು ಸುಭದ್ರವಾಗಿ ಎಲ್ಲ ರೀತಿಯಿಂದಲೂ ಪ್ರಗತಿ ಸಾಧ್ಯವಿದೆ. ಜನರ ಅಭ್ಯುದಯವೂ ಆಗಲಿದೆ. ಆದರೆ, ಜಾತಿ,ಭಾಷೆ ಇತ್ಯಾದಿಗಳ ವಿಚಾರದಲ್ಲಿ ಜನರನ್ನು ಒಡೆಯುವ ಹಿತಾಸಕ್ತಿಗಳು ನಿರಂತರವಾಗಿ ಕೆಲಸ ಮಾಡುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಧ್ಯಾತ್ಮ ಜ್ಞಾನದ ಕಾರಣಕ್ಕೆ ಭಾರತ ವಿಶ್ವದಲ್ಲಿ ಗೌರವಿಸಲ್ಪಡುತ್ತಿದೆ. ಅದರ ಪುನರುತ್ಥಾನವಾಗಬೇಕು. ಮುಂದಿನ ದಿನಗಳಲ್ಲಿ ಸದನಕ್ಕೆ ಒಳ್ಳೆಯವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಬರಬೇಕು ಮತ್ತು ಒಳ್ಳೆಯ ತಂಡ ಸರ್ಕಾರವನ್ನು ಮುನ್ನಡೆಸಬೇಕು’ ಎಂದು ಕಾಗೇರಿ ಹೇಳಿದರು.

ಇವನ್ನೂ ಓದಿ
* 15ನೇ ವಿಧಾನಸಭೆ: ಮುಗಿದ ಅಧ್ಯಾಯ, 3 ಮುಖ್ಯಮಂತ್ರಿಗಳನ್ನು ಕಂಡ ರಾಜ್ಯ
* ಅಧಿವೇಶನದ ಕೊನೆಯ ದಿನ ದೇವೇಗೌಡ, ಸಿದ್ದರಾಮಯ್ಯ ಹೊಗಳಿದ ಯಡಿಯೂರಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.