ಮೈಸೂರು: ‘ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳ ಪಠ್ಯವನ್ನು ದೇಶದ 22 ಭಾಷೆಗಳಲ್ಲಿ ಹೊರತರುವ ಉದ್ದೇಶ ಕೇಂದ್ರ ಸರ್ಕಾರಕ್ಕಿದೆ’ ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ ತಿಳಿಸಿದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನೂತನ ಆವರಣವನ್ನು ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (ನೀಟ್) ಹಾಜರಾಗುತ್ತಿರುವವರ ಪೈಕಿ ಇಂಗ್ಲಿಷ್‌ನಲ್ಲಿ 10 ಲಕ್ಷ, 1.5 ಲಕ್ಷ ವಿದ್ಯಾರ್ಥಿಗಳು ಹಿಂದಿಯಲ್ಲಿ ಬರೆಯುತ್ತಿದ್ದಾರೆ. ಆದರೆ, ಇತರೆ ಭಾರತೀಯ ಭಾಷೆಗಳ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹೆಚ್ಚು ಹಾಜರಾಗುತ್ತಿಲ್ಲ. ಹಾಗಾಗಿ, ಭಾರತೀಯ ಭಾಷೆಗಳಲ್ಲೂ ಪಠ್ಯ ಸಾಮಗ್ರಿ ನೀಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

3 ವರ್ಷಗಳ ಕಾರ್ಯಯೋಜನೆ:

ಭಾರತೀಯ ಭಾಷೆಗಳ ಅಭಿವೃದ್ಧಿಗಾಗಿ 3 ವರ್ಷಗಳ ಕಾರ್ಯಯೋಜನೆಯನ್ನು ಸಿದ್ಧಪಡಿಸುವ ಚಿಂತನೆ ನಡೆದಿದೆ. ಇದಕ್ಕಾಗಿ ಶೀಘ್ರವೇ ಎಲ್ಲ 22 ಭಾರತೀಯ ಭಾಷೆಗಳ ತಜ್ಞರನ್ನು ಒಳಗೊಂಡ ರಾಷ್ಟ್ರೀಯ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.

ಅನುವಾದಕ್ಕೆ ಅವಕಾಶ:

‘ಭಾರತೀಯ ಭಾಷೆಗಳ ಜ್ಞಾನಭಂಡಾರವನ್ನು ಹೆಚ್ಚಿಸುವುದು ನಮ್ಮ ಉದ್ದೇಶ. ಹಾಗಾಗಿ, ಅನುವಾದ ಕಾರ್ಯಕ್ಕೆ ಮಹತ್ವ ನೀಡಲಾಗಿದೆ. ಈಗಾಗಲೇ ಗೂಗಲ್ ಕಂಪನಿಯು ಅನುವಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಭಾರತೀಯ ಭಾಷೆಗಳನ್ನು ಇಂಗ್ಲಿಷಿಗೆ ಅನುವಾದಿಸುತ್ತಿದೆ. ಆದರೆ, ಅನುವಾದ ಸಮರ್ಪಕವಾಗಿ ಆಗುತ್ತಿಲ್ಲ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರತಿ ಭಾಷೆಯಲ್ಲೂ ಕನಿಷ್ಠ 10 ಲಕ್ಷದಿಂದ 20 ಲಕ್ಷದವರೆಗೆ ಪದಕೋಶ ಭಾರತೀಯ ಭಾಷಾ ಸಂಸ್ಥಾನದಲ್ಲಿ ಸಂಗ್ರಹವಾಗಿದೆ. ಇದನ್ನು ‘ಗೂಗಲ್’ ಮಾದರಿಯ ಖಾಸಗಿ ಕಂಪನಿಗಳೊಂದಿಗೆ ಹಂಚಿಕೊಳ್ಳುತ್ತೇವೆ. ಜತೆಗೆ, ವ್ಯಾಕರಣ ಕೋಶಗಳನ್ನೂ ನೀಡುತ್ತೇವೆ. ಇದರಿಂದ ಅನುವಾದ ಕಾರ್ಯ ಸಮರ್ಪಕವಾಗಲಿದೆ’ ಎಂದು ಮಾಹಿತಿ ನೀಡಿದರು.

ಕೆಎಸ್‌ಒಯು ಮಾನ್ಯತೆ: ವಿಳಂಬಕ್ಕೆ ಕೇಂದ್ರ ಹೊಣೆಯಲ್ಲ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಸಿಗದಿರುವುದಕ್ಕೆ ಕೇಂದ್ರ ಸರ್ಕಾರ ಹೊಣೆಯಲ್ಲ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.

‘ನಾಲ್ಕು ವರ್ಷಗಳಿಂದ ಮಾನ್ಯತೆ ನೀಡಿದೇ ವಿಳಂಬವಾಗುತ್ತಿರುವುದಕ್ಕೆ ನಾವು ಹೊಣೆಯಲ್ಲ. ಅದು ಯುಜಿಸಿಗೆ ಸಂಬಂಧಪಟ್ಟ ವಿಚಾರ. ಈ ಕುರಿತು ನಮಗೆ ಮನವಿ ಸಿಕ್ಕಿಲ್ಲ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.