ಬೆಂಗಳೂರು: ದೇಶ, ವಿದೇಶದ ಸೇನಾಪಡೆ ಮುಖ್ಯಸ್ಥರು, ಕೈಗಾರಿಕೋದ್ಯಮಿಗಳು, ಗಣ್ಯರು ವೈಮಾನಿಕ ವಸ್ತು ಪ್ರದರ್ಶನದ ಮಳಿಗೆಗಳಿಗೆ ನೀಡಿ ಸೇನಾ ವಾಹನಗಳು, ದೇಶಿ ಮತ್ತು ವಿದೇಶಿ ಯುದ್ಧ ವಿಮಾನಗಳು, ಅವುಗಳ ತಯಾರಿಕ ವಿಧಾನ, ಸಾಮರ್ಥ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.

ವೈಮಾನಿಕ ಪ್ರದರ್ಶನದ ವೀಕ್ಷಣೆಗೆ ಸಾರ್ವಜನಿಕರಿಗೆ ಸೋಮವಾರ ಅವಕಾಶ ಇರಲಿಲ್ಲ. ದೇಶ ಹಾಗೂ ವಿದೇಶದ ಲಘು ಯುದ್ದ ವಿಮಾನ (ಎಲ್ಸಿಎ), ಹೆಲಿಕಾಪ್ಟರ್, ಯುದ್ದ ಟ್ಯಾಂಕರ್ ಮಾದರಿಗಳನ್ನು ಪ್ರೇಕ್ಷಕರು ವೀಕ್ಷಿಸಿದರು. ಅವುಗಳ ಕಾರ್ಯಕ್ಷಮತೆ, ವೇಗ, ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆಲವರು ಮಾದರಿಗಳ ಬಳಿ ನಿಂತು ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಂಡರು.

‘ವೈಮಾನಿಕ ಪ್ರದರ್ಶನದ 15ನೇ ಆವೃತ್ತಿಯಲ್ಲಿ ಹತ್ತು ಪೆವಿಲಿಯನ್ಗಳಲ್ಲಿ ಮಳಿಗೆಗಳನ್ನು ತೆರೆಯಲಾಗಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ, ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತವು ಸ್ವಾಲಂಬನೆ ಸಾಧಿಸುತ್ತಿರುವುದರ ಪ್ರತೀಕವಾಗಿ ಈ ಪ್ರದರ್ಶನ ನಿಲ್ಲಲಿದೆ. ವೈಮಾನಿಕ, ಬಾಹ್ಯಾಕಾಶ ಸಂಶೋಧನೆ, ನವೋದ್ಯಮಗಳ ಕೇಂದ್ರದಲ್ಲಿ ಹೂಡಿಕೆ ಸಾಧ್ಯತೆಗಳ ಬಗ್ಗೆ ಮಾತುಕತೆಗಳಿಗೆ ಇದು ವೇದಿಕೆಯಾಗಲಿದೆ’ ಎಂದು ಆಯೋಜಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.