ಬೆಂಗಳೂರು: ಭಾರತೀಯ ಮದ್ಯಗಳ (ಐಎಂಎಲ್) ಮತ್ತು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಹೆಚ್ಚಿಸಿ ರಾಜ್ಯ ಸರ್ಕಾರ ಮಂಗಳವಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಪರಿಷ್ಕೃತ ದರವು ಗುರುವಾರದಿಂದ (ಮೇ 15) ಜಾರಿಗೆ ಬರಲಿದೆ.

ಮದ್ಯದ ಮೇಲಿನ ಸುಂಕ ಪರಿಷ್ಕರಣೆ ಮತ್ತೆ ತೆರಿಗೆ ಸ್ಲ್ಯಾಬ್ಗಳ ಬದಲಾವಣೆಗಾಗಿ ಹಣಕಾಸು ಇಲಾಖೆಯು, ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) (ಎರಡನೇ ತಿದ್ದುಪಡಿ) ನಿಯಮಗಳು–2025ರ ಗಜೆಟ್ ಅಧಿಸೂಚನೆ ಹೊರಡಿಸಿದೆ. ಐಎಂಎಲ್ನ ತೆರಿಗೆ ಸ್ಲ್ಯಾಬ್ಗಳನ್ನು ಪೂರ್ಣ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ.

‘ಎಇಡಿ ಹೆಚ್ಚಳದಿಂದ ಅಗ್ಗದ ದರದಲ್ಲಿ ಸಿಗುತ್ತಿದ್ದ ಬ್ರ್ಯಾಂಡಿ, ವಿಸ್ಕಿ, ಜಿನ್, ರಮ್ನ ಬೆಲೆ ರಾಜ್ಯದಲ್ಲಿ ಇನ್ನು ಮುಂದೆ ಮತ್ತಷ್ಟು ದುಬಾರಿಯಾಗಲಿದೆ. 180 ಎಂಎಲ್ನ ಬಾಟಲಿ ಮತ್ತು ಸ್ಯಾಷೆಗಳ ಬೆಲೆಯಲ್ಲಿ ಗರಿಷ್ಠ ₹ 15 ಏರಿಕೆ ಆಗಲಿದೆ’ ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಈಗ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಐಎಂಎಲ್ಗಳಲ್ಲಿ ಒಟ್ಟು 18 ತೆರಿಗೆ ಸ್ಲ್ಯಾಬ್ಗಳಿವೆ. ಈ ಸ್ಲ್ಯಾಬ್ಗಳನ್ನು 16ಕ್ಕೆ ಇಳಿಸಲಾಗಿದೆ. ಮೊದಲ ನಾಲ್ಕು ಸ್ಲ್ಯಾಬ್ಗಳನ್ನು ಗರಿಷ್ಠ ಬೆಲೆಯನ್ನು ಪರಿಷ್ಕರಿಸಲಾಗಿದೆ.

ಎಇಡಿ ಏರಿಕೆಯೊಂದಿಗೆ ಪ್ರೀಮಿಯಂ ಅಥವಾ ಇತರೆ ಬಿಯರ್ ಬ್ರ್ಯಾಂಡ್ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲಿಗೆ ಸರಾಸರಿ ₹ 5ರಿಂದ ₹ 15 ಏರಿಕೆ ಆಗಲಿದೆ. ಅಗ್ಗದ ಬಿಯರ್ಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಲಿದ್ದು, ₹ 25 ರವರೆಗೆ ಕಡಿಮೆ ಆಗಲಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.