ನವದೆಹಲಿ: ಬೆಂಗಳೂರು ನಗರದ ಸುತ್ತಮುತ್ತಲಿನ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ ದೇಶದ ಅತಿದೊಡ್ಡ ವೃತ್ತರೈಲು ಸಂಪರ್ಕಜಾಲ (ಸರ್ಕ್ಯುಲರ್ ರೈಲ್ವೆ) ನಿರ್ಮಾಣಕ್ಕೆ ಪ್ರತಿ ಕಿ.ಮೀ.ಗೆ ₹220.31 ಕೋಟಿ ವೆಚ್ಚ ಆಗಲಿದೆ.

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶ ಹೊಂದಿರುವ 240 ಕಿ.ಮೀ ವರ್ತುಲ ರೈಲು ಯೋಜನೆಗೆ ಒಟ್ಟು ₹81,117 ಕೋಟಿ ಬೇಕಾಗುತ್ತದೆ. ವರ್ತುಲ ರೈಲು ಜಾಲಕ್ಕೆ ಪೂರಕವಾಗಿ 127 ಕಿ.ಮೀ. ಉದ್ದದ ಸಂಪರ್ಕ ಜಾಲವನ್ನೂ ನಿೆರ್ಮಿಸಬೇಕಾಗುತ್ತದೆ. ಈ ಸಂಬಂಧ ಪ್ರಾಥಮಿಕ ಅಧ್ಯಯನ ನಡೆಸಿರುವ ನೈರುತ್ಯ ರೈಲ್ವೆಯು ರೈಲ್ವೆ ಇಲಾಖೆಗೆ ವರದಿ ಸಲ್ಲಿಸಿದೆ. ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣ ಹಾಗೂ ನೈಸ್ ರಸ್ತೆ ನಡುವಿನ ಅಂತರ 22 ಕಿ.ಮೀ. ಆದರೆ, ವರ್ತುಲ ರೈಲು 41 ಕಿ.ಮೀ. ದೂರದಲ್ಲಿರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಯೋಜನೆಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲು ಬೆಂಗಳೂರು ಹೊರವಲಯದ ಖಾಲಿ ಜಾಗಗಳನ್ನು ಬಳಸಲಾಗುತ್ತದೆ. ನಗರದೊಳಗೆ ಸಾಧ್ಯವಾದಷ್ಟು ಕಡಿಮೆ ಪ್ರಮಾಣದ ಭೂಸ್ವಾಧೀನ ಮಾಡಲಾಗುತ್ತದೆ. ದೂರದ ಮಾರ್ಗದ ಪ್ರಯಾಣಿಕ ರೈಲುಗಳ ಮಾರ್ಗ ಬದಲಾಯಿಸಲಾಗುತ್ತದೆ. ನಗರ ಪ್ರದೇಶಕ್ಕೆ ಬಾರದ ರೀತಿಯಲ್ಲಿ ಸರಕು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗುತ್ತದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.