ಬೆಂಗಳೂರು: ‘ಒಳ ಮೀಸಲಾತಿ ಹಂಚಿಕೆಯಲ್ಲಿ ತಳ ಸಮುದಾಯಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ರಾಜ್ಯ ಸರ್ಕಾರ ಪರಿಶಿಷ್ಟರಿಗೆ ಇರುವ ಶೇ 17ರಷ್ಟು ಮೀಸಲಾತಿಯನ್ನು ಶೇ 18ಕ್ಕೆ ಹೆಚ್ಚಿಸಿ, ನ್ಯಾಯಕೊಡುವ ಪ್ರಯತ್ನ ಮಾಡುತ್ತದೆಯೇ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಒಳ ಮೀಸಲಾತಿಯಲ್ಲೂ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ. ಪರಿಶಿಷ್ಟರ ಮಧ್ಯೆಯೇ ಒಳಜಗಳ ಸಷ್ಟಿಸಿದೆ. ರಾಜಕೀಯ ಪಂಚಾಯಿತಿ ಮೂಲಕ 6-6-5 ಹಂಚಿಕೆ ಸೂತ್ರ ಸಿದ್ಧಪಡಿಸಿದೆ. ನ್ಯಾಯಮೂರ್ತಿ ನಾಗಮೋಹನದಾಸ್, ನ್ಯಾಯಮೂರ್ತಿ ಸದಾಶಿವ ಆಯೋಗ ಹಾಗೂ ಮಾಧುಸ್ವಾಮಿ ಅವರ ವರದಿಗಳನ್ನು ಕಡೆಗಣಿಸಿ, ರಾಜಕೀಯ ನಿರ್ಣಯದ ಮೂಲಕ ಮೀಸಲಾತಿ ನಿಗದಿ ಮಾಡುವುದಾದರೆ ಆಯೋಗಗಳನ್ನು ಏಕೆ ನೇಮಿಸಬೇಕಿತ್ತು’ ಎಂದು ಅವರು ಕೇಳಿದರು.

‘ಹಿಂದೆ ತಮ್ಮ ನೇತೃತ್ವದ ಬಿಜೆಪಿ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಪರಿಶಿಷ್ಟರ ಮೀಸಲಾತಿ ಪ್ರಮಾಣವನ್ನು ಶೇ 17ಕ್ಕೆ ಹೆಚ್ಚಿಸಿ, ಒಳ ಮೀಸಲು ಘೋಷಣೆ ಮಾಡಿದ್ದೆವು. ಆಗ, ಇದೇ ಕಾಂಗ್ರೆಸ್ ನಾಯಕರು ಟೀಕೆ ಮಾಡಿದ್ದರು. ನಮ್ಮ ನಿರ್ಧಾರವನ್ನು ಈಗ ಅವರೇ ಒಪ್ಪಿಕೊಂಡಂತೆ ಆಗಿದೆ. ಅದಕ್ಕಾಗಿ ಅವರು ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

‘ಒಂದೆಡೆ ನೆಲೆ ನಿಂತು ಬದುಕನ್ನೇ ಕಟ್ಟಿಕೊಳ್ಳದ ಅಲೆಮಾರಿಗಳಿಗೆ ಯಾವುದೇ ಮೀಸಲಾತಿ ಕೊಟ್ಟಿಲ್ಲ. ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಸಮುದಾಯವನ್ನು ಯಾವ ಗುಂಪಿಗೂ ಸೇರಿಸದೆ ಅತಂತ್ರ ಮಾಡಲಾಗಿದೆ. ಲಂಬಾಣಿ, ಭೋವಿ ಸಮುದಾಯಕ್ಕೆ ಶೇ 0.5 ಹೆಚ್ಚಿಸಿ, ಆ ಗುಂಪಿಗೆ 59 ಜಾತಿಗಳನ್ನು ಸೇರಿಸಿದ್ದಾರೆ. ಸರ್ಕಾರದ ತೀರ್ಮಾನವು ಸುಪ್ರೀಂಕೋರ್ಟ್ ಸೂಚನೆ, ಸಾಮಾಜಿಕ ನ್ಯಾಯಕ್ಕೂ ವಿರುದ್ಧವಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ, ಮತಬ್ಯಾಂಕ್ ಸುರಕ್ಷತೆಗಾಗಿ ಮೀಸಲು ವಿಷಯ ಬಳಸಿಕೊಂಡಿದ್ದಾರೆ’ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಸೆ.10ರಿಂದ ಬಿಜೆಪಿ ಹೋರಾಟ

ರಾಜ್ಯ ಸರ್ಕಾರದ ಒಳಮೀಸಲಾತಿ ನೀತಿಯಿಂದ ಪರಿಶಿಷ್ಟರ ಎಲ್ಲ ಒಳಪಂಗಡಗಳಿಗೂ ಅನ್ಯಾಯವಾಗಿದೆ. ಇದರ ವಿರುದ್ಧ ಸೆ.10ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿದರು. ‘ಅಲೆಮಾರಿ ಸಮುದಾಯ ಹಾಗೂ ಇತರೆ ಜಾತಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.