ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನಲ್ಲಿ ವಿಧಾನಸಭೆಯಲ್ಲಿ ನಡೆದ ಪ್ರಶ್ನೋತ್ತರಗಳ ಮಾಹಿತಿ ಇಲ್ಲಿದೆ

ಫಸಲ್ ಬಿಮಾ: 74 ಲಕ್ಷ ರೈತರು ನೋಂದಣಿ

ಫಸಲ್ ಬಿಮಾ ಯೋಜನೆ ಜನಪ್ರಿಯವಾಗಿದ್ದು, ಕಳೆದ ಸಾಲಿನಲ್ಲಿ 74 ಲಕ್ಷ ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದು, ₹5,534 ಕೋಟಿ ಬೆಳೆ ವಿಮಾ ಮೊತ್ತ ಪಾವತಿ ಮಾಡಲಾಗಿದೆ. ನೋಂದಣಿ ಮಾಡಿಸಿಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ. ಈ ಯೋಜನೆಯಡಿ ವಿಮಾ ಕಂತನ್ನು ಸರ್ಕಾರ ಶೇ 98ರಷ್ಟು ಪಾವತಿಸಿದರೆ, ರೈತರು ಶೇ 2ರಷ್ಟು ಪಾವತಿಸಿದರೆ ಸಾಕು.

–ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಪ್ರಶ್ನೆ: ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್

‘ಕೇಂದ್ರದ ಅನುದಾನ ಬಂದರೆ ಬಿಡುಗಡೆ’

ನರೇಗಾದಡಿ ಸಾಮಗ್ರಿ ವೆಚ್ಚಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ. ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಅದೇ ರೀತಿ ಹಣಕಾಸು ಆಯೋಗದಿಂದಲೂ ಸುಮಾರು ₹2,500 ಕೋಟಿ ಅನುದಾನ ಬರಬೇಕು. ಇದನ್ನು ಕೇಂದ್ರದ ಗಮನಕ್ಕೆ ತರಲಾಗುವುದು. ಅನುದಾನ ಬಂದ ಬಳಿಕ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು.

–ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಪ್ರಶ್ನೆ: ಎಚ್.ಡಿ.ತಮ್ಮಯ್ಯ, ಕಾಂಗ್ರೆಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.