ಬೆಂಗಳೂರು: ‘ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರ’ದಡಿ ಬಿಬಿಎಂಪಿ ಬದಲು ಗರಿಷ್ಠ ಏಳು ನಗರ ಪಾಲಿಕೆಗಳನ್ನು ರಚಿಸಬೇಕು, ಮೇಯರ್ಗೆ 30 ತಿಂಗಳ ಅಧಿಕಾರ ಅವಧಿ ಇರಬೇಕು ಎಂದು ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿ ಶಿಫಾರಸು ಮಾಡಿದೆ.

ಸಮಿತಿಯ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರು ವಿಧಾನಸಭೆಯಲ್ಲಿ ಬುಧವಾರ ವರದಿ ಮಂಡಿಸಿದರು.

‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ–2024’ ಅನ್ನು 2024ರ ಜುಲೈ 25ರಂದು ವಿಧಾನಸಭೆಯಲ್ಲಿ ಮಂಡಿಸಿದಾಗ, ಸದಸ್ಯರು ಆಕ್ಷೇಪಿಸಿದ್ದರು. ಸದನ ಸಮಿತಿಗೆ ವಹಿಸಲು ಒತ್ತಾಯಿಸಿದ್ದರಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಸೂದೆಯನ್ನು ಪರಿಶೀಲಿಸಲು, ಸದನ ಸಮಿತಿ ರಚಿಸುವ ಭರವಸೆ ನೀಡಿದ್ದರು. ಅದರಂತೆ, ವಿಧಾನ ಸಭಾಧ್ಯಕ್ಷರು 2024ರ ಆಗಸ್ಟ್ 22ರಂದು ‘ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿ’ ರಚಿಸಿ, ರಿಜ್ವಾನ್ ಅರ್ಷದ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರು.

‘ಸಮಿತಿಯು ನಗರಾಭಿವೃದ್ಧಿ ಇಲಾಖೆ, ಸಂಸದೀಯ ವ್ಯವಹಾರಗಳು, ಶಾಸನ ರಚನಾ ಇಲಾಖೆ, ಕಾನೂನು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಅಲ್ಲದೆ, ನಗರವನ್ನು ಪ್ರತಿನಿಧಿಸುವ ಶಾಸಕರಿಂದ ಸಲಹೆ ಪಡೆದುಕೊಳ್ಳಲಾಗಿದೆ. ನಾಗರಿಕರು, ಸಂಘ–ಸಂಸ್ಥೆಗಳಿಂದಲೂ ಅಭಿಪ್ರಾಯ ಸ್ವೀಕರಿಸಿ, ಹಲವು ಬದಲಾವಣೆಗೆ ಸಲಹೆ ನೀಡಿ, ವರದಿಯನ್ನು ಸಿದ್ಧಪಡಿಸಿ ಮಂಡಿಸಲಾಗಿದೆ’ ಎಂದು ರಿಜ್ವಾನ್ ಅರ್ಷದ್ ಮಾಹಿತಿ ನೀಡಿದ್ದಾರೆ.

ಆರ್ಥಿಕ ಅಧಿಕಾರ ಇಲ್ಲ: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ಕ್ಕೆ (ಜಿಬಿಎ) ನಗರ ಪಾಲಿಕೆಗಳ ತೆರಿಗೆ, ಶುಲ್ಕ, ಉಪಕರ ಮತ್ತು ಬಳಕೆದಾರರ ಶುಲ್ಕಗಳ ದರಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕಾರ ಇರುವಂತಿಲ್ಲ. ಇದು ಒಂದು ಸಲಹಾತ್ಮಕ ಪ್ರಾಧಿಕಾರವಾಗಿದ್ದು, ನೀತಿಗೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರ ಹೊಂದಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ’ ಸಂವಿಧಾನ 74ನೇ ತಿದ್ದುಪಡಿಗೆ ವ್ಯತಿರಿಕ್ತವಾಗುತ್ತದೆಯೇ ಎಂಬ ಬಗ್ಗೆ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪಡೆದಿರುವ ಸಮಿತಿ, ನಗರ ಪಾಲಿಕೆಗಳ ನಡುವೆ ಅನುದಾನ ಹಂಚಿಕೆಗೆ ರಾಜ್ಯ ಹಣಕಾಸು ಆಯೋಗದ ಶಿಫಾರಸು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದೆ.

ರಾಜ್ಯ ಸರ್ಕಾರ ಪ್ರಮುಖ ಯೋಜನೆಗಳಿಗೆ ಮೂಲ ಅನುದಾನವನ್ನು ಜಿಬಿಎ ಮೂಲಕ ಒದಗಿಸಬಹುದು. ಜಿಬಿಎನ ಆಡಳಿತಾತ್ಮಕ ವೆಚ್ಚಗಳನ್ನು ಸರ್ಕಾರವೇ ಒದಗಿಸಬೇಕು. ಪ್ರಮುಖ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಸಂಬಂಧಪಟ್ಟ ನಗರ ಪಾಲಿಕೆಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.