ಬೆಂಗಳೂರು: ಕೇಂದ್ರ ರೇಷ್ಮೆ ಮಂಡಳಿ (ಸೆಂಟ್ರಲ್ ಸಿಲ್ಕ್ ಬೋರ್ಡ್) ನಿಲ್ದಾಣದಲ್ಲಿ ಮೆಟ್ರೊ ಹತ್ತಲಾರದೇ ವಾಪಸ್ ಹೊರಗೆ ಬಂದಿದ್ದಕ್ಕೆ ದಂಡ ವಿಧಿಸಿದ್ದಾರೆ ಎಂದು ಮೆಟ್ರೊ ಪ್ರಯಾಣಿಕ ನಿಖಿಲ್ ಎನ್ನುವವರು ತನ್ನ ‘ನಿಕ್ಲ್_ಭಟ್ ’ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘20 ನಿಮಿಷ ಕಾದೆ. ಆಗ ಬಂದ ಮೆಟ್ರೊ ತುಂಬಿದ್ದರಿಂದ ನನ್ನನ್ನು ಸೇರಿದಂತೆ ಹಲವರಿಗೆ ಹತ್ತಲು ಸಾಧ್ಯವಾಗಲಿಲ್ಲ. ನಾನು ನಿಲ್ದಾಣದಿಂದ ಹೊರಬಂದೆ. ಅದಕ್ಕಾಗಿ ₹ 50+ ₹ 9.5 ದಂಡ ವಿಧಿಸಿದ್ದಾರೆ’ ಎಂದು ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.

‘ಒಳಗೆ ಬಂದ ಮೆಟ್ರೊ ನಿಲ್ದಾಣದಿಂದ ವಾಪಸ್ ಹೊರಗೆ ಬಂದರೆ ಅವರು ₹ 10 (ಸ್ಮಾರ್ಟ್ ಕಾರ್ಡ್ ಇದ್ದರೆ ₹ 9.5) ದರ ಪಾವತಿ ಮಾಡಬೇಕಾಗುತ್ತದೆ. ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ಅವಧಿ ಕಳೆದು ಹೊರ ಬಂದರೆ ₹ 50 ದಂಡ ವಿಧಿಸಲಾಗುತ್ತದೆ. ನಿಯಮ ಇರುವುದೇ ಹಾಗೆ’ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.