ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಡೋ ಪಿತಾಮಹನ ಮರಿಮಗನಿಂದ ‘ಜೋಡೊ’ ಸಾಧ್ಯವೇ: ರಾಹುಲ್‌ಗೆ ಬಿಜೆಪಿ ಪ್ರಶ್ನೆ

Last Updated 1 ಅಕ್ಟೋಬರ್ 2022, 7:31 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಸುತ್ತಿರುವ ‘ಭಾರತ್ ಜೋಡೊ ಯಾತ್ರೆ’ ಕುರಿತು ಬಿಜೆಪಿ ಲೇವಡಿ ಮಾಡಿದೆ.

ಭಾರತ್ ಜೋಡೊ ಯಾತ್ರೆ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಭಾರತದ ವಿಭಜನೆಯ ಪಿತಾಮಹನ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ?, ತನ್ನ ಅಧಿಕಾರದ ಹಪಹಪಿಗೆ ದೇಶವಾಸಿಗಳ ರಕ್ತಹರಿಸಿದ ಪಕ್ಷದಿಂದ ಭಾರತದ ಐಕ್ಯತೆ ಸಾಧ್ಯವೇ?, ಭಾರತದ ಐಕ್ಯಾತಾ ಯಾತ್ರೆಯ ನಿಜವಾದ ಅಜೆಂಡಾ ಭಾರತ ವಿಭಜನೆಯೇ ಆಗಿದೆ’ ಎಂದು ವಾಗ್ದಾಳಿ ನಡೆಸಿದೆ.

‘ರಾಹುಲ್ ಗಾಂಧಿ ಯಾತ್ರೆ ಹಿಂದೂ ವಿರೋಧಿ ಯಾತ್ರೆಯಾಗಿ ಬದಲಾಗುತ್ತಿದೆ. ತಮಿಳುನಾಡಿನಿಂದ ಆರಂಭಗೊಂಡ ಯಾತ್ರೆ ಹೆಜ್ಜೆ ಹೆಜ್ಜೆಗೂ ಹಿಂದೂಗಳನ್ನು ಅವಮಾನಿಸುತ್ತಿದೆ. ಹಿಂದೂ ಸಮಾಜವನ್ನು ಕೆಣಕಿ ನಿಮ್ಮ ಮತ ಬ್ಯಾಂಕ್‌ ಗಟ್ಟಿಗೊಳಿಸುವ ಹುನ್ನಾರವೇ ಇದು’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಕೇರಳದಲ್ಲೂ ಹಿಂದೂ ದ್ವೇಷವನ್ನು ರಾಹುಲ್‌ ಗಾಂಧಿ ಮುಂದುವರೆಸಿದ್ದಾರೆ. ನಡುಬೀದಿಯಲ್ಲಿ ಗೋವಿನ ತಲೆ ಕಡಿದ ಯುವ ಕಾಂಗ್ರೆಸ್‌ ಮುಖಂಡನೊಂದಿಗೆ ಪಾದಯಾತ್ರೆ ಮಾಡುವ ಮೂಲಕ ರಾಹುಲ್‌ ಗಾಂಧಿ ಬಹುಸಂಖ್ಯಾತ ಹಿಂದೂಗಳನ್ನು ಅಪಮಾನಿಸಿದ್ದಾರೆ. ಹಿಂದೂಗಳ ಪೂಜನೀಯ ಗೋವಿನ ಹತ್ಯೆಗೆ ರಾಹುಲ್‌ ಗಾಂಧಿ ಅವರ ಸಮ್ಮತಿಯಿದೆಯೇ’ ಎಂದು ಬಿಜೆಪಿ ಟೀಕಿಸಿದೆ.

‘ತಮಿಳುನಾಡು, ಕೇರಳದಲ್ಲಿ ತೋರಿದ ಹಿಂದೂ ದ್ವೇಷವನ್ನು ರಾಹುಲ್ ಗಾಂಧಿ ಕರ್ನಾಟಕದಲ್ಲೂ ಬಿಡಲಿಲ್ಲ. ಮತಾಂಧರ ಮೂಲಕ ಡಿ.ಜೆ ಹಳ್ಳಿಯ ಹಿಂದೂಗಳ ಮನೆಗೆ ಬೆಂಕಿಹಚ್ಚಲು ಪ್ರಚೋದನೆ ನೀಡಿದ ಸಂಪತ್‌ ರಾಜ್‌ ಯಾತ್ರೆಯಲ್ಲಿ ರಾಹುಲ್‌ ಜೊತೆ ಹೆಜ್ಜೆ ಹಾಕಿದ್ದಾನೆ. ಕಾಂಗ್ರೆಸ್ಸಿಗರೇ, ಯಾತ್ರೆಯ ಹೆಸರನ್ನು ಹಿಂದೂ ವಿರೋಧಿ ಯಾತ್ರೆ ಎಂದು ಬದಲಾಯಿಸಿಕೊಳ್ಳುವಿರಾ’ ಎಂದು ಬಿಜೆಪಿ ಕಿಡಿಕಾರಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT