ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ‘ನೀವು (ಬಿಜೆಪಿ, ಜೆಡಿಎಸ್) ಕುರ್ಚಿಯನ್ನು ಎಷ್ಟೇ ಅಲ್ಲಾಡಿಸಿದರೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ’ ಎಂದು ವಿರೋಧ ಪಕ್ಷಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೊಳ್ಳೇಗಾಲ ತಾಲ್ಲೂಕಿನಲ್ಲಿ ಶನಿವಾರ ಭರಚುಕ್ಕಿ ಜಲಪಾತೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್‌ನವರು ಕುರ್ಚಿಯನ್ನು ಅಲುಗಾಡಿದಷ್ಟೂ ಗಟ್ಟಿಯಾಗಿ ಅಧಿಕಾರ ನಡೆಸಿ ಬಡವರ, ಶೋಷಿತರ ಪರವಾಗಿ ಕಾರ್ಯಕ್ರಮ ರೂಪಿಸುತ್ತಲೇ ಇರುತ್ತೇನೆ ಎಂದರು.
ಹಿಂದೆ ಚಾಮರಾಜನಗರ ಜಿಲ್ಲೆಗೆ ಕಾಲಿಟ್ಟರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆ ಬಿತ್ತಲಾಗಿತ್ತು. ಮುಖ್ಯಮಂತ್ರಿಯಾದ ಬಳಿಕ ಹತ್ತಕ್ಕೂ ಹೆಚ್ವು ಬಾರಿ ಜಿಲ್ಲೆಗೆ ಬಂದಿದ್ದೇನೆ. ಚಾಮರಾಜನಗರಕ್ಕೆ ಬಂದಾಗಲೆಲ್ಲ ಕುರ್ಚಿ ಹೆಚ್ಚು ಗಟ್ಟಿಯಾಗಿದೆ ಎಂದರು.
ಸಿದ್ದರಾಮಯ್ಯ ಕಾಲುಗುಣದಿಂದ ರಾಜ್ಯದಲ್ಲಿ ಮಳೆ ಇಲ್ಲ ಎಂದು ದೂರಿದ್ದರು. ಈ ಬಾರಿ ಉತ್ತಮ ಮಳೆಯಾಗಿದೆ. ನನ್ನ ವಿರುದ್ಧ ಬಿತ್ತಿದ ಮೂಢನಂಬಿಕೆಯೂ ಸುಳ್ಳಾಗಿದೆ ಎಂದರು.