ಬೆಂಗಳೂರು: ‘ಅಪಘಾತ ನಡೆದ ಸಂದರ್ಭದಲ್ಲಿ ವಾಹನಕ್ಕೆ ಪರವಾನಗಿ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೇ ಇದ್ದರೂ ವಿಮಾ ಕಂಪನಿಯು ಅಪಘಾತದ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.

‘ಅಪಘಾತಕ್ಕೆ ಒಳಗಾದ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೂ ನ್ಯಾಯಮಂಡಳಿ ಪರಿಹಾರ ನೀಡುವಂತೆ ನಿರ್ದೇಶಿಸಿದೆ’ ಎಂದು ಆಕ್ಷೇಪಿಸಿ, ‘ಶ್ರೀರಾಮ ಜನರಲ್ ಕಂಪನಿ ಇನ್ಶೂರೆನ್ಸ್ ಕಂಪನಿ’ ಮತ್ತು ‘ಪರಿಹಾರದ ಮೊತ್ತ ಹೆಚ್ಚಳ ಮಾಡಲು ನಿರ್ದೇಶಿಸಬೇಕು’ ಎಂದು ಮೃತರ ವಾರಸುದಾರರು ಕೋರಿದ್ದ ಎಂಎಫ್ಎ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ವಾಹನ ಮಾಲೀಕರು ತಮ್ಮ ವಾಹನವನ್ನು ರಸ್ತೆಗಿಳಿಸುವ ವೇಳೆ ಪರವಾನಗಿ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಹೊಂದಿರಲಿಲ್ಲ. ಇದು ವಾಹನ ಮಾಲೀಕ ಅನುಸರಿಸಬೇಕಾಗಿದ್ದ ಮೂಲಭೂತ ನಿಯಮ. ಆದರೆ ಈ ಪ್ರಕರಣದಲ್ಲಿ ಇದನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ, ವಿಮಾ ಕಂಪನಿಯನ್ನು ಸಂಪೂರ್ಣ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು. ಮಾಲೀಕರೇ ಪರಿಹಾರ ಪಾವತಿಸಲು ನಿರ್ದೇಶಿಸಬೇಕು’ ಎಂಬ ವಿಮಾ ಕಂಪನಿಯ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.

‘ಸ್ವರಣ್ ಸಿಂಗ್ ಮತ್ತು ಯಲ್ಲವ್ವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಉಲ್ಲೇಖಿಸಿರುವಂತೆ ಇದೊಂದು ಮೂಲಭೂತ ನಿಯಮದ ಉಲ್ಲಂಘನೆ ಆಗಿದ್ದರೂ ವಿಮಾ ಕಂಪನಿ ತನ್ನ ಹೊಣೆಗಾರಿಕೆಯಿಂದ ನುಣಚಿಕೊಳ್ಳಲು ಅವಕಾಶ ಇರುವುದಿಲ್ಲ. ಹೀಗಾಗಿ, ವಿಮಾ ಕಂಪನಿಯು ಪರಿಹಾರದ ಮೊತ್ತವನ್ನು ಈ ಆದೇಶ ತಲುಪಿದ ಎಂಟು ವಾರಗಳ ಒಳಗಾಗಿ ಪಾವತಿಸಬೇಕು’ ಎಂದು ನ್ಯಾಯಪೀಠ ವಿವರಿಸಿದೆ.

ಪ್ರಕರಣವೇನು?: ಕಟ್ಟಡ ಕಾರ್ಮಿಕ ನಂದೀಶಪ್ಪ (55) ಹೊಸಕೋಟೆ-ಚಿಕ್ಕ ತಿರುಪತಿ ಮಾರ್ಗದಲ್ಲಿ ಬೈಸಿಕಲ್ನಲ್ಲಿ ಹೋಗುತ್ತಿದ್ದ ವೇಳೆ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದಿತ್ತು. ಈ ಅಪಘಾತವು 2013ರ ಜುಲೈ 31ರಂದು ನಡೆದಿತ್ತು. ಅಪಘಾತ ನಡೆದ ಏಳು ದಿನಗಳ ಬಳಿಕ ನಂದೀಶಪ್ಪ ಮೃತಪಟ್ಟಿದ್ದರು. ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದ ನಂದೀಶಪ್ಪ ಅವರಿಗೆ, ಏಳು ದಿನಗಳಲ್ಲಿ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಸಂಬಂಧ ಪ್ರಕರಣದಲ್ಲಿ ನ್ಯಾಯಮಂಡಳಿ ₹13.88 ಲಕ್ಷ ಪರಿಹಾರ ನೀಡಲು ಆದೇಶಿಸಿತ್ತು.

‘ಪರಿಹಾರದ ಮೊತ್ತ ಹೆಚ್ಚಳ ಮಾಡುವಂತೆ ನಿರ್ದೇಶಿಸಬೇಕು’ ಎಂದು ಮೃತ ನಂದೀಶಪ್ಪ ಅವರ ಪತ್ನಿ ಕೋರಿದ್ದರು. ಇದೇ ವೇಳೆ ವಿಮಾ ಕಂಪನಿಯು, ‘ಬೆಂಗಳೂರಿನ ಲಘು ವ್ಯಾಜ್ಯಗಳು ಮತ್ತು ಮೋಟಾರು ಅಪಘಾತ ಕ್ಲೇಮ್ ನ್ಯಾಯಮಂಡಳಿ 2016ರ ಆಗಸ್ಟ್ 4ರಂದು ನೀಡಿರುವ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಿತ್ತು.

ಈ ಎರಡೂ ಪ್ರತ್ಯೇಕ ಮೇಲ್ಮನವಿಗಳನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, ಪರಿಹಾರದ ಮೊತ್ತ ₹13.44 ಲಕ್ಷವನ್ನು ₹13.88 ಲಕ್ಷಕ್ಕೆ ಹೆಚ್ಚಳ ಮಾಡಿದ್ದು, ಶೇ 6ರಷ್ಟು ವಾರ್ಷಿಕ ಬಡ್ಡಿ ಸೇರಿಸಿ ಪಾವತಿ ಮಾಡುವಂತೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.