ಬೆಂಗಳೂರು: ‘ಮತ್ತೊಬ್ಬರ ಅನ್ನದ ತಟ್ಟೆಗೆ ಕೈ ಹಾಕಬಾರದು ಎಂದು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಅವರು ಬಹಿರಂಗ ಸಭೆಯಲ್ಲೇ ಹೇಳಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಜಾತಿವಾರು ಸಮೀಕ್ಷೆಯ ಕುರಿತ ಅಸಮಾಧಾನ ಮತ್ತು ಗೊಂದಲಕ್ಕೆ ಇರುವ ಸಾಕ್ಷಿ’ ಎಂದು ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೊಯಾ ಹೇಳಿದ್ದಾರೆ.

ಈ ಕುರಿತ ಹೇಳಿಕೆ ನೀಡಿರುವ ಅವರು, ಜಾತಿ– ಜಾತಿಗಳ ಮಧ್ಯೆ ಇನ್ನಷ್ಟು ಕಂದಕ ಸೃಷ್ಟಿಸಬಾರದು ಎಂಬುದು ಎಚ್ಚರಿಕೆಯಾಗಿದೆ ಎಂದಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬಾರದು ಮತ್ತು ವಾಲ್ಮೀಕಿ ಸಮುದಾಯದ ಪಾಲನ್ನು ಕಡಿಮೆ ಮಾಡಬಾರದು ಎಂಬ ಕೂಗು ಆಡಳಿತ ಪಕ್ಷದಿಂದಲೇ ಬಂದಿದೆ. ಸ್ವಂತ ಜಾತಿಯ ಹಿತ ಕಾಪಾಡುವುದಕ್ಕಾಗಿ ವಾಲ್ಮೀಕಿ ಸಮುದಾಯದ ಹಿತ ಬಲಿಕೊಡಬಾರದು’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.