‘2028ರಲ್ಲಿ ಡಿಕೆಶಿ ಸಿ.ಎಂ ಆಗಲಿ’
‘ವಿಧಾನಸಭೆಗೆ 2028ರಲ್ಲಿ ನಡೆಯುವ ಚುನಾವಣೆ ಯನ್ನು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲೇ ನಡೆಸೋಣ. ಬಹಮತ ಪಡೆದ ನಂತರ ಐದು ವರ್ಷ ಅವರೇ ಮುಖ್ಯಮಂತ್ರಿ ಆಗಲಿ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಶಿವಕುಮಾರ್ ಅವರು ಪಕ್ಷದ ನಾಯಕ. ಅವರು ಮುಖ್ಯಮಂತ್ರಿ ಯಾಗಲು ಯಾರ ತಕರಾರೂ ಇಲ್ಲ. ಈಗ 5 ವರ್ಷ ಸಿದ್ದರಾಮಯ್ಯ ಅವರೇ ಮುಂದುವರಿಯಲಿ. ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಸರಿಯಲ್ಲ’ ಎಂದರು.