ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶೋಕ ಅವರ ಶೋಕ ಗೀತೆಯನ್ನು ಕೇಳುವವರು ಯಾರು: ಕಾಂಗ್ರೆಸ್‌

Published 12 ಡಿಸೆಂಬರ್ 2023, 14:22 IST
Last Updated 12 ಡಿಸೆಂಬರ್ 2023, 14:22 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ಶೋಕ ಗೀತೆಯನ್ನು ಕೇಳುವವರು ಯಾರು ಎಂದು ರಾಜ್ಯ ಬಿಜೆ‍‍ಪಿ ಘಟಕವನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಆ'ಶೋಕ' ಗೀತೆ ಎನ್ನುವ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಬರೆದುಕೊಂಡಿದೆ.

‘ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಕ್ಕೆ ಬಿಜೆಪಿ ಶಾಸಕರೇ ಅಭಿನಂದಿಸಲು ಒಪ್ಪಲಿಲ್ಲ. ಸಭಾತ್ಯಾಗ ಮಾಡಿದರೆ ಬಿಜೆಪಿ ಶಾಸಕರೇ ಕುರ್ಚಿ ಬಿಟ್ಟು ಏಳಲಿಲ್ಲ. ಶಾಸಕಾಂಗ ಸಭೆಗೆ ಬರುವುದಿಲ್ಲ ಎಂದು ಬಿಜೆಪಿ ಶಾಸಕರಿಂದಲೇ ಘೇರಾವ್. ವಿರೋಧ ಪಕ್ಷದ ನಾಯಕನ ಕೊಠಡಿಗೆ ಬರಲು ಒಪ್ಪದ ಬಿಜೆಪಿ ಶಾಸಕ. ಸಭಾತ್ಯಾಗ ಮಾಡಿರುವುದಕ್ಕೆ ಸ್ವಪಕ್ಷದ ಶಾಸಕರಿಂದಲೇ ತರಾಟೆ. ಬಕೆಟ್ ರಾಜಕಾರಿಣಿ ಎಂದು ಬಿಜೆಪಿಗರಿಂದಲೇ ಬಿರುದು. ವಿರೋಧ ಪಕ್ಷದ ನಾಯಕ ಎನ್ನುವುದನ್ನು ಮರೆತು ಸ್ವಪಕ್ಷದ ನಾಯಕರಿಂದಲೇ ಸದನದಲ್ಲಿ ಮಾತನಾಡಲು ಅಡ್ಡಿ’ ಎಂದು ಕಾಂಗ್ರೆಸ್ ಬರೆದುಕೊಂಡಿದೆ.

ಅಲ್ಲದೆ, ವಿರೋಧ ಪಕ್ಷದ ನಾಯಕನಿಗೆ ಮತ್ತೊಂದು ವಿರೋಧ ಪಕ್ಷ ಸೃಷ್ಟಿಯಾಗಿರುವಾಗ ಅಶೋಕರ ಶೋಕ ರಾಗವನ್ನು ಕೇಳುವವರು ಯಾರು ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT