ಉಡುಪಿ: ಅಲ್ಪಸಂಖ್ಯಾತರ ಮತಗಳಿಗೆ ಜೊಲ್ಲು ಸುರಿಸುವ ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾರೆ. ಆರ್‌ಎಸ್‌ಎಸ್ ಟೀಕಿಸಲು ಕಾಂಗ್ರೆಸ್‌ನಲ್ಲಿ ಸ್ಪರ್ಧೆ ಏರ್ಪಟ್ಟಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶನಿವಾರ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸಚಿವರು, ‘ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಿ ಸಂಘದಿಂದ ಬಂದವರು. ನಾನೂ ಸಂಘದಿಂದಲೇ ಸಂಸ್ಕಾರ ಕಲಿತಿದ್ದು, ಸಂಘದ ಸಿದ್ಧಾಂತಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ’ ಎಂದರು.

252 ಎಫ್‌ಎಸ್‌ಎಲ್ ತಜ್ಞರ ನೇಮಕ

ಹಿಂದೆ, ಅಪರಾಧ ಕೃತ್ಯಗಳು ನಡೆದ ಸ್ಥಳಕ್ಕೆ ಪೊಲೀಸರು ಮಾತ್ರ ಹೋಗುತ್ತಿದ್ದರು. ಇನ್ಮುಂದೆ, ಎಫ್‌ಎಸ್‌ಎಲ್ ತಜ್ಞರು ತೆರಳಿ ಸಾಕ್ಷ್ಯಗಳನ್ನು ಸಂಗ್ರಹಿಸಲಿದ್ದಾರೆ. ಶೀಘ್ರವೇ 252 ಎಫ್‌ಎಸ್‌ಎಲ್ ತಜ್ಞರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಜತೆಗೆ ಪ್ರತಿವರ್ಷ 4 ಸಾವಿರ ಪೊಲೀಸರ ನೇಮಕಾತಿ ಮೂಲಕ ಸಿಬ್ಬಂದಿ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಸೈಬರ್ ಅಪರಾಧಗಳ ತಡೆಗೆ ಸೈಬರ್ ಕ್ರೈಂ ವಿಭಾಗಕ್ಕೆ ಕಾಯಕಲ್ಪ ನೀಡಲಾಗುವುದು. ಸೈಬರ್ ಠಾಣೆಯ ಅಧಿಕಾರಿಗಳಿಗೆ ಗುಜರಾತ್‌ನಲ್ಲಿ ತರಬೇತಿ ಕೊಡಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಆನ್‌ಲೈನ್ ಜೂಜು ಹಾಗೂ ಹಣ ಕಟ್ಟಿ ಆಡುವ ಸ್ಕಿಲ್ ಗೇಮ್‌ಗಳನ್ನು ನಿಷೇಧಿಸಲಾಗಿದೆ. ಕಾನೂನುಗಳಿಗೆ ತಿದ್ದುಪಡಿ ತಂದು ಶಿಕ್ಷೆ ಹಾಗೂ ದಂಡದ ಪ್ರಮಾಣವನ್ನೂ ಹೆಚ್ಚಿಸಲಾಗಿದೆ ಎಂದರು.

ಗೋಹತ್ಯೆನಿಷೇಧ ಕಾಯ್ದೆ ವಿಫಲವಾಗಲು ಅವಕಾಶ ಕೊಡದಂತೆ ಪೊಲೀಸರಿಗೆ ಸೂಚಿಸಲಾಗಿದೆ. ಮತಾಂತರ ತಡೆಗೆ ಈಗಿರುವ ಕಾಯ್ದೆ ಸಾಕಾಗಿದ್ದರೂ, ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸಲಾಗುವುದು. ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆ ವಿರುದ್ಧವೂ ತನಿಖೆ ನಡೆಯುತ್ತಿದೆ.ದೇಶದಭದ್ರತೆಯವಿಚಾರವಾಗಿರುವುದರಿಂದಹೆಚ್ಚಿನವಿವರನೀಡಲುಸಾದ್ಯವಿಲ್ಲಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.