ಬೆಂಗಳೂರು:ಸಿವಿಲ್ ಕಾಮಗಾರಿಗಳ ಪ್ರಗತಿಗೆ ಸಂಬಂಧಿಸಿದ ವಿವರಗಳನ್ನು ‘ಕಾಂಟ್ರ್ಯಾಕ್ಟ್ ಮ್ಯಾನೇಜ್ಮೆಂಟ್ ಮಾಡ್ಯೂಲ್–ಸಿಎಂಎಂ’ನಲ್ಲಿ ಅಪ್ಲೋಡ್ ಮಾಡಿದರಷ್ಟೇ ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.

ಬಿಲ್ ಪಾವತಿಯನ್ನು ಪಾರದರ್ಶಕವಾಗಿಸಲು ಈ ವ್ಯವಸ್ಥೆ ತರಲಾಗಿದೆ ಎಂದು ಸರ್ಕಾರ ಹೇಳುತ್ತದೆಯಾದರೂ, ಗುತ್ತಿಗೆದಾರರು ಹೊಸ ಸ್ವರೂಪದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಸಿಎಂಎಂ ವ್ಯವಸ್ಥೆ 2024ರ ಆಗಸ್ಟ್ನಿಂದಲೇ ಜಾರಿಯಲ್ಲಿದೆ. ಈವರೆಗೂ ಅದರಲ್ಲಿ ಗುತ್ತಿಗೆ ಒಪ್ಪಂದ ಪತ್ರವನ್ನು ಅಪ್ಲೋಡ್ ಮಾಡಿದರೆ ಸಾಕಿತ್ತು. ಆದರೆ, ಈಗ ಅದರಲ್ಲಿ ಸಿವಿಲ್ ಕಾಮಗಾರಿಗಳ ಪ್ರಗತಿ ವಿವರಗಳ ಜತೆಗೆ ಬಿಲ್ ಅಪ್ಲೋಡ್ ಮಾಡಬೇಕು ಎಂದು ಹಣಕಾಸು ಇಲಾಖೆಯು ಈಚೆಗೆ ಆದೇಶಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಸೂಚನೆ ಮೇರೆಗೆ ಈ ಆದೇಶ ಹೊರಡಿಸಲಾಗಿದೆ.

ರಾಜ್ಯದಲ್ಲಿ 36,709 ಕಾಮಗಾರಿಗಳನ್ನು ಟೆಂಡರ್ ಮೂಲಕ ಗುತ್ತಿಗೆ ನೀಡಿದ್ದರೂ, ಸಿಎಂಎಂನಲ್ಲಿ 505 ಗುತ್ತಿಗೆಗಳ ವಿವರಗಳಷ್ಟೇ ಇದ್ದವು. ಸೆಪ್ಟೆಂಬರ್ನಲ್ಲಿ ನಡೆದ ಕೆಡಿಪಿ ಸಭೆಯ ವೇಳೆ ಈ ಅಂಶವನ್ನು ಗಮನಿಸಿದ ಮುಖ್ಯ ಕಾರ್ಯದರ್ಶಿಯು, ಕಾಮಗಾರಿಗಳ ಪ್ರಗತಿಯ ವಿವರಗಳನ್ನೂ ಅಪ್ಲೋಡ್ ಮಾಡಬೇಕು ಎಂದು ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

‘ಸಿಎಂಎಂನಲ್ಲಿ ವಿವರಗಳನ್ನು ಅಪ್ಲೋಡ್ ಮಾಡುವುದರಿಂದ ಪಾರದರ್ಶಕತೆ ಬರಲಿದೆ. ಅಧಿಕಾರಿ–ಸಿಬ್ಬಂದಿ ಬಿಲ್ಗಳನ್ನು ತಡೆಹಿಡಿಯುವುದು, ಅಕ್ರಮವಾಗಿ ಬಿಲ್ ಪ್ರಕ್ರಿಯೆ ನಡೆಸುವುದಕ್ಕೆ ತಡೆ ಬೀಳಲಿದೆ’ ಎನ್ನುತ್ತಾರೆ ಹಣಕಾಸು ಕಾರ್ಯದರ್ಶಿ (ಬಜಟ್ ಮತ್ತು ಸಂಪನ್ಮೂಲ) ಪಿ.ಸಿ.ಜಾಫರ್.

ಆದರೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ (ಕೆಎಸ್ಸಿಎ) ಪ್ರತಿನಿಧಿಯೊಬ್ಬರು, ‘ಸರ್ಕಾರವು ನಮಗೆ ಬಿಲ್ ಪಾವತಿ ಮಾಡುವುದೇ 2–3 ವರ್ಷಕ್ಕೆ ಒಮ್ಮೆ. ನಾವು ಕಾಮಗಾರಿಗಳ ಪ್ರಗತಿ ವಿವರಗಳನ್ನು ಅಪ್ಲೋಡ್ ಮಾಡುತ್ತಿದ್ದಂತೆಯೇ ಜಿಎಸ್ಟಿ ಪಾವತಿಸಬೇಕಾಗುತ್ತದೆ. ಬಿಲ್ ಹಣ ಬಿಡುಗಡೆಯಾಗುವುದು 2–3 ವರ್ಷಗಳಾದರೂ, ಮೊದಲೇ ಜಿಎಸ್ಟಿ ಪಾವತಿಸಬೇಕಾಗುವುದರಿಂದ ನಮಗೆ ವಿಪರೀತ ಹೊರೆಯಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.