ದೆಹಲಿ ಸ್ಫೋಟಕ್ಕೂ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಮೊಬೈಲ್ ಬಳಸುತ್ತಿದ್ದ ಉಗ್ರಗಾಮಿಗೂ ನಂಟು ಇರಬಹುದು. ಈ ಬಗ್ಗೆ ಎನ್‌ಐಎಯಿಂದ ಆಳವಾದ ತನಿಖೆ ನಡೆಸಬೇಕು.
– ಆರ್.ಅಶೋಕ, ವಿಧಾನಸಭೆ ವಿಪಕ್ಷ ನಾಯಕ
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಬಿಜೆಪಿಯವರು ದೆಹಲಿಯ ಸ್ಫೋಟ ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ರಾಜೀನಾಮೆ ಕೇಳುತ್ತಾರೆಯೇ?
– ಸಂತೋಷ್ ಲಾಡ್, ಕಾರ್ಮಿಕ ಸಚಿವ
ಪ್ರಿಯಾಂಕ್ ಖರ್ಗೆಗೆ ಇರೋದೇ ದುರ್ಬುದ್ಧಿ. ಆತ ಮೂರ್ಖ ಬೇರೆ. ಮೂರ್ಖ ಮತ್ತು ದುರ್ಬುದ್ಧಿ ಇರುವವರಿಗೆ ಬುದ್ಧಿ ಹೇಳಿದರೆ ಉಪಯೋಗ ಆಗದು. ಇಂತಹವರಿಗೆ ಯಾರೂ ಬುದ್ಧಿ ಹೇಳಲು ಆಗದು.
– ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ
ಸ್ವತಂತ್ರ ಭಾರತದಲ್ಲಿ ಅತ್ಯಂತ ದುರ್ಬಲ ಗೃಹ ಸಚಿವರು ಇದ್ದರೆ, ಅದು ಅಮಿತ್ ಶಾ
– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ
ಕರ್ನಾಟಕದಲ್ಲಿ ಪ್ರತಿ ದಿನ ಒಂದಿಲ್ಲೊಂದು ರೀತಿ ಹಿಂಸಾಚಾರಗಳು ಆಗುತ್ತವೆ. ಅವುಗಳಲ್ಲಿ ಎಷ್ಟು ಕಾಂಗ್ರೆಸ್ ಸರ್ಕಾರದ ವೈಫಲ್ಯ ಆಗಿರಬಾರದು.
– ಬಸವರಾಜ ಬೊಮ್ಮಾಯಿ, ಸಂಸದ
ದೆಹಲಿಯಲ್ಲಿ ಸಂಭವಿಸಿದ ಸ್ಫೋಟಕ್ಕೂ ಬಿಹಾರ ಚುನಾವಣೆಗೂ, ತಳುಕು ಹಾಕುವುದಿಲ್ಲ. ಇದು ಉಗ್ರರ ಕೃತ್ಯವೇ ಅಥವಾ ರಾಸಾಯನಿಕದಿಂದಾದ ಸ್ಫೋಟವೆ ಎಂಬುದು ತನಿಖೆಯಿಂದ ಮೊದಲು ದೃಢಪಡಬೇಕಿದೆ.
– ಎಂ.ಬಿ. ಪಾಟೀಲ, ಕೈಗಾರಿಕಾ ಸಚಿವ
ಬೆಂಕಿ ಬಿದ್ದಾಗಲೂ ಸಿದ್ದರಾಮಯ್ಯ ಅವರು ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕೆ?
– ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ