ಬೆಂಗಳೂರು: ‘ಅಮೆರಿಕವು ಭಾರತದ ಮೇಲೆ ಸಾರಿರುವ ಸುಂಕ ಸಮರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಮತ್ತು ಜಪಾನ್ ಜತೆಗೆ ವ್ಯಾಪಾರ ವೃದ್ಧಿಗೆ ಮಾತುಕತೆ ನಡೆಸಿರುವುದು ಉತ್ತಮ ನಡೆ’ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಈ ಸಂಬಂಧ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಅವರು, ‘ಅಮೆರಿಕವು ಅವಿವೇಕದ ಮತ್ತು ಅನ್ಯಾಯದ ಸುಂಕ ಸಮರದ ನಂತರ ನೀವು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಹೊರಟಿರುವುದು ಎಲ್ಲ ಭಾರತೀಯರಂತೆ ನನಗೆ ಸಮಾಧಾನ ತಂದಿದೆ. ಎರಡೂ ದೇಶಗಳ ನಿಮ್ಮ ಭೇಟಿ ಅತ್ಯಂತ ಯಶಸ್ವಿಯಾಯಿತು’ ಎಂದಿದ್ದಾರೆ.

‘ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಬಗ್ಗೆ ನೀವು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗೆ ಮಾತನಾಡಿದ್ದೀರಿ. ಈ ವಿಚಾರದಲ್ಲಿ ಭಾರತದ ನಿಲುವನ್ನು ಜಗತ್ತಿನ ಇತರ ದೇಶಗಳು ಈ ಹಿಂದೆಂದಿಗಿಂತ ಈಗ ಹೆಚ್ಚು ಪರಿಗಣಿಸುತ್ತವೆ ಎಂದು ನಾನು ನಿರೀಕ್ಷಿಸಿದ್ದೇನೆ. ನಿಮ್ಮ ಈ ‘ಬಹುಮೈತ್ರಿ’ ನಿಲುವು, ನಮ್ಮ ಈ ಹಿಂದಿನ ‘ಅಲಿಪ್ತ ನೀತಿ’ಗಿಂತ ಭಿನ್ನವಾಗಿದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿರಲಿದೆ’ ಎಂದಿದ್ದಾರೆ.

ಭಾರತವು ಜಗತ್ತಿನ ಬೇರೆಲ್ಲಾ ದೇಶಗಳಿಗಿಂತ ಹಣಕಾಸು ಸ್ಥಿತಿ ಮತ್ತು ಜನಸಂಖ್ಯೆಯಲ್ಲಿ ಅಗಾಧತೆ ಹೊಂದಿದೆ. ಅಮೆರಿಕವು ತಡವಾಗಿ ಆದರೂ ನಮ್ಮ ಬಳಿಗೆ ಬರಲೇಬೇಕಾಗುತ್ತದೆ
ಎಚ್.ಡಿ.ದೇವೇಗೌಡ, ರಾಜ್ಯಸಭಾ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.