ಬೆಂಗಳೂರು: ಡಯಾಬಿಟಿಸ್ ಪೇಷೆಂಟ್‌ಇದ್ದೇವೆ ಮುಗಿಸಿ ಅಥವಾ ಊಟ ತರಿಸಿಕೊಡಿ, ಅದ್ಯಾವುದೂ ಬೇಡ, ಮಂಗಳವಾರಕ್ಕೆ ಕಲಾಪ ಮುಂದೂಡಿಬಿಡಿ...

ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ವಿಧಾನಸಭೆಯಲ್ಲಿ ಕೇಳಿಸಿದ ಮಾತು ಇದು.

‘ವಯಸ್ಸಾದವರು ಇದ್ದಾರೆ, ಮಹಿಳೆ ಯರು ಇದ್ದಾರೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರೆ, ಕೆಲವು ಕಾಂಗ್ರೆಸ್ ಸದಸ್ಯರು ಸಭೆಯಿಂದ ಹೊರ ನಡೆದರು.

‘ಹೊಟ್ಟೆ ಹಸಿಯುತ್ತಿದೆ ಸಭಾಧ್ಯಕ್ಷರೆ, ಹೊಟ್ಟೆ ಹಸಿಯುತ್ತಿದೆ. ವಯಸ್ಸಾದವರು ಇದ್ದಾರೆ ಮನೆಗೆ ಹೋಗಬೇಕು’ ಎಂದು ಆಳುವ ಪಕ್ಷದ ಸದಸ್ಯರ ಅಳಲು ಕೇಳಿಸಿತು.

ಆದರೆ ಪಟ್ಟು ಬಿಡದ ಬಿಜೆಪಿ ಸದಸ್ಯರು ಸ್ಥಳ ಬಿಟ್ಟು ಕದಲಲಿಲ್ಲ. ಪರಿಸ್ಥಿತಿಯನ್ನು ಹತೋಟಿಗೆ ತರಲು ಉಪಸಭಾಧ್ಯಕ್ಷರಿಗೆ ಸಾಧ್ಯವಾಗಲಿಲ್ಲ.

‘ಯಾರೂ ವೋಟ್ ಆಫ್ ಕಾನ್ಫಿಡೆನ್ಸ್‌ಗೆ ತಯಾರಿಲ್ಲ’ ಎಂದು ಯು.ಟಿ.ಖಾದರ್ ಹೇಳಿದಾಗ, ‘ನಾವು 105ಜನ ಇದ್ದೇವೆ, ಮತಕ್ಕೆ ಹಾಕಿ’ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ‘ಸ್ಕ್ರಿಪ್ಟ್, ನಿರ್ದೇಶನ ಮೊದಲೇ ತಯಾರಾಗಿದೆ’ ಎಂದು ಬಿಜೆಪಿಯ ಸಿ.ಟಿ.ರವಿ ಛೇಡಿಸಿದರು. ಸಚಿವ ಆರ್.ವಿ.ದೇಶಪಾಂಡೆ, ಕೆಲವು ಮಹಿಳಾ ಸದಸ್ಯರೂ ಕಲಾಪವನ್ನು ಮುಂಡೂಡಲು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.