ಬೆಂಗಳೂರು: ‘ಬೇರೆ ರಾಜ್ಯಗಳಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರುವ ಸಿರಪ್ನ ಬಗ್ಗೆ ನಿಗಾ ವಹಿಸುವಂತೆ ನಮ್ಮ ರಾಜ್ಯದ ಔಷಧ ನಿಯಂತ್ರಣ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಮ್ಮ ರಾಜ್ಯಕ್ಕೆ ಆ ಸಿರಪ್ನ ಪೂರೈಕೆ ಇಲ್ಲ. ಹೀಗಾಗಿ ಪೋಷಕರು ಆತಂಕ ಪಡಬೇಕಾಗಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಈ ಸಿರಪ್ನ ಪೂರೈಕೆ ಇಲ್ಲ. ಆದರೆ ಖಾಸಗಿಯವರು ತರಿಸಿಕೊಳ್ಳುತ್ತಿದ್ದಾರೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದರು.

‘ಬೇರೆಲ್ಲಾ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಔಷಧಗಳ ಪರೀಕ್ಷೆ ಹೆಚ್ಚಾಗಿ ನಡೆಯುತ್ತದೆ. ಈ ವಿಚಾರದಲ್ಲಿ ಕರ್ನಾಟಕದ ಮಾದರಿಯನ್ನು ಅನುಸರಿಸಿ ಎಂದು ಕೇಂದ್ರವು ಇತರ ರಾಜ್ಯಗಳಿಗೆ ಸಲಹೆ ನೀಡಿದೆ’ ಎಂದರು.

‘ಎಲ್ಲ ರಾಜ್ಯಗಳಲ್ಲಿ ನಡೆಯುವ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗುವ ಔಷಧಗಳನ್ನು ಕೇಂದ್ರದ ಜಾಲತಾಣದಲ್ಲಿ ಪ್ರಕಟಿಸಲಾಗುತ್ತಿದೆ. ಆದರೆ, ಅಂತಹ ಪ್ರಕಟಣೆಗಳನ್ನು ತಕ್ಷಣವೇ ಎಲ್ಲ ರಾಜ್ಯಗಳ ಗಮನಕ್ಕೆ ತರುವ ವ್ಯವಸ್ಥೆಯಾಗಬೇಕು’ ಎಂದು ಒತ್ತಾಯಿಸಿದರು.
.11 ಮಕ್ಕಳ ಸಾವಿಗೆ ಕೆಮ್ಮಿನ ಸಿರಪ್ ನಂಟು: ಆರೋಗ್ಯ ಸಚಿವಾಲಯದಿಂದ ತೀವ್ರ ತನಿಖೆ.11 ಮಕ್ಕಳ ಸಾವು: ತಮಿಳುನಾಡು ಬಳಿಕ ಕೇರಳದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ನಿಷೇಧ.ಮಕ್ಕಳ ಸರಣಿ ಸಾವು: ತಮಿಳುನಾಡಿನಲ್ಲಿ 'ಕೋಲ್ಡ್ರಿಫ್' ಕೆಮ್ಮಿನ ಸಿರಪ್ ನಿಷೇಧ.ಮಕ್ಕಳ ಸರಣಿ ಸಾವು: 6 ರಾಜ್ಯಗಳ 19 ಔಷಧಿಗಳ ಉತ್ಪಾದನಾ ಘಟಕಗಳಲ್ಲಿ CDSCO ತಪಾಸಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.