ಕೆಲವರು ಚರ್ಚೆ ಮಾಡಿದ ಕೂಡಲೇ ಸರ್ಕಾರ ಬದಲಾಗುವುದಿಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚಿಸದಂತೆ ಎಲ್ಲರಿಗೂ ಹೈಕಮಾಂಡ್ ಸೂಚನೆ ನೀಡಿದೆ. ನಾನಂತೂ ಈವರೆಗೂ ಎಲ್ಲೂ ಚರ್ಚೆ ಮಾಡಿಲ್ಲ.
-ಕೆ.ಜೆ. ಜಾರ್ಜ್, ಇಂಧನ ಸಚಿವ
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮುಂದುವರಿಯಲಿದ್ದಾರೆ. ಹೀಗಾಗಿ ದಲಿತ ಮುಖ್ಯಮಂತ್ರಿ ಚರ್ಚೆ ಸದ್ಯಕ್ಕೆ ಅಗತ್ಯವಿಲ್ಲ. ಈ ಚರ್ಚೆಗೆ ಕಾರಣವೂ ಇಲ್ಲ, ಅವಕಾಶವೂ ಇಲ್ಲ ಹಾಗೂ ಪೂರಕ ಸನ್ನಿವೇಶವೂ ಇಲ್ಲ.