ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕೃಷಿ ವಿವಿಯ ಕುಲಪತಿಯಾಗಿ ಡಾ.ಎಸ್‌.ವಿ.ಸುರೇಶ್‌ 

Last Updated 28 ಅಕ್ಟೋಬರ್ 2022, 14:41 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಡಾ.ಎಸ್‌.ವಿ.ಸುರೇಶ್‌ ಅವರನ್ನು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ಶುಕ್ರವಾರ ನೇಮಿಸಿ ಆದೇಶಿಸಿದ್ದಾರೆ.

ತುಮಕೂರು ಜಿಲ್ಲೆಯಸುರೇಶ್‌,ವಿವಿಯ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರವೇ ವಿಸಿ ಆಗಿ ಅಧಿಕಾರ ವಹಿಸಿಕೊಂಡರು.

ದಕ್ಷಿಣ ಕರ್ನಾಟಕದ 10 ಜಿಲ್ಲೆಯ ವ್ಯಾಪ್ತಿಯನ್ನು ಈ ಕೃಷಿ ವಿಶ್ವವಿದ್ಯಾಲಯ ಹೊಂದಿದೆ. ಕುಲಪತಿಯಾಗಿದ್ದ ಡಾ.ಎಸ್‌.ರಾಜೇಂದ್ರ ಪ್ರಸಾದ್ ಅವರ ಅವಧಿ ಸೆ.17ಕ್ಕೆ ಮುಕ್ತಾಯಗೊಂಡಿತ್ತು. ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕೆ.ಸಿ. ನಾರಾಯಣಸ್ವಾಮಿ ಪ್ರಭಾರ ಕುಲಪತಿ ಆಗಿದ್ದರು.

ಮೂವರು ನಡುವೆ ಪೈಪೋಟಿ:ಈ ಹುದ್ದೆಗೆ ಮೂವರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೃಷಿ ವಿಭಾಗದ ಡೀನ್‌ ಎನ್‌.ಬಿ.ಪ್ರಕಾಶ್‌, ಕೊಡಗು ಜಿಲ್ಲೆ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಡೀನ್‌ ಕುಶಾಲಪ್ಪ ಹಾಗೂ ಸುರೇಶ್‌ ನಡುವೆ ಸ್ಪರ್ಧೆಯಿತ್ತು. ಅಂತಿಮವಾಗಿ ಸುರೇಶ್‌ ಆಯ್ಕೆಗೊಂಡಿದ್ಧಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT