ಎಸ್‌ಇಪಿ ಅನ್ವಯವಾಗದು: ಸುಧಾಕರ್
ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ವಿದೇಶಿ ವಿಶ್ವವಿದ್ಯಾಲಯಗಳಿಗೆ ಅನ್ವಯಿಸುವುದಿಲ್ಲ ಎಂದು ಸಚಿವ ಸುಧಾಕರ್ ಹೇಳಿದರು. ಖಾಸಗಿ ಮತ್ತು ಡೀಮ್ಡ್-ಟು-ಬಿ ವಿಶ್ವವಿದ್ಯಾಲಯಗಳೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನೇ ಅನುಸರಿಸುತ್ತಿವೆ. ವಿದೇಶಿ ವಿಶ್ವವಿದ್ಯಾಲಯಗಳು ಅವರದೇ ಆದ ನೀತಿ ಪಠ್ಯಕ್ರಮಗಳನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ ಹೊಂದಿರುತ್ತವೆ. ಹಾಗಾಗಿ ಎಸ್‌ಇಪಿಯನ್ನು ಅನುಸುವಂತೆ ಸೂಚಿಸಲು ಸಾಧ್ಯವಿಲ್ಲ ಎಂದರು. ‘ರಾಜ್ಯ ಸರ್ಕಾರ ಅನುಸರಿಸುವ ಮೀಸಲಾತಿ ನೀತಿಯನ್ನು ವಿದೇಶಿ ವಿಶ್ವವಿದ್ಯಾಲಯಗಳು ಅನುಸರಿಸುವಂತೆ ಒತ್ತಡ ಹಾಕಲು ಆಗದು. ಆದರೆ ಕೆಲ ವಿಶ್ವವಿದ್ಯಾಲಯಗಳು ಸಾಮಾಜಿಕ ಕಳಕಳಿಯ ಆಧಾರದಲ್ಲಿ ಮೀಸಲಾತಿ ನೀಡಲು ಸಮ್ಮತಿಸಿವೆ’ ಎಂದು ಹೇಳಿದರು.