ಬೆಂಗಳೂರು: ರಾಜ್ಯದಲ್ಲಿ ಇಂದು (ಬುಧವಾರ) ಗಣೇಶ ಹಬ್ಬದ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ.

ನಿನ್ನೆ (ಮಂಗಳವಾರ) ಗೌರಿ ಹಬ್ಬದ ಅಂಗವಾಗಿ ವಿಶೇಷ ಪೂಜೆಗಳು ನಡೆದಿದ್ದವು.
.ಗೌರಿ–ಗಣೇಶ ಮತ್ತು ಈದ್ ಮಿಲಾದ್ ಮೆರವಣಿಗೆ: ಕಮಾಂಡ್ ಸೆಂಟರ್ನಿಂದಲೇ ನಿಗಾ.ಬಾಗೇಪಲ್ಲಿ: ಗಣೇಶ ಹಬ್ಬ ಆಚರಣೆಗೆ ಸಿದ್ಧತೆ .
ಮನೆ ಮನೆಗಳಲ್ಲಿ ವಿನಾಯಕನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದ್ದು, ಗಣಪತಿಯ ಆರಾಧನೆ ಶ್ರೆದ್ಧೆ, ಭಕ್ತಿಯಿಂದ ನಡೆಯುತ್ತಿದೆ. ಗಣೇಶನ ಮೂರ್ತಿ ನೋಡಿ ಖುಷಿಯಲ್ಲಿರುವ ಮಕ್ಕಳು ಹೊಸ ಉಡುಪುಗಳಲ್ಲಿ ಕಂಗೊಳಿಸುತ್ತಿದ್ದಾರೆ.

ಮೈಸೂರು, ಕಲಬುರಗಿ, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಎಲ್ಲಾ ಜಿಲ್ಲೆಗಳು ಸೇರಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ಯಾ ಬೀದಿ ಬೀದಿಗಳಲ್ಲೂ ವಿಘ್ನ ನಿವಾರಕ, ವಿಘ್ನವಿನಾಶಕ, ಮೂಷಿಕ ವಾಹನ, ಮೋದಕ ಪ್ರಿಯ, ವಿನಾಯಕ, ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ಇಂದೇ ಹಬ್ಬವಾಗಿದ್ದರಿಂದ ಬಹುತೇಕ ಕಡೆ ಹೆಚ್ಚು ಗಣಪತಿ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಬೆಂಗಳೂರಿನ ದೊಡ್ಡ ಗಣೇಶ ದೇಗುಲ ಸೇರಿದಂತೆ ವಿನಾಯಕ ದೇವಾಲಯಗಳಲ್ಲಿ ಹಬ್ಬದ ಸಡಗರ ಕಳೆಗಟ್ಟಿದೆ.

ನಗರಗಳಲ್ಲಿ ಸಂಚಾರ ದಟ್ಟಣೆಯೂ ಏರ್ಪಟ್ಟಿದೆ. ಕೆಲವೆಡೆ ಬೆಳಗ್ಗೆ ಹಾಗೂ ಸಂಜೆ ಮಳೆ ಸುರಿದಿದೆ. ಮಳೆಯನ್ನು ಲೆಕ್ಕಿಸದೇ ಜನರು ವಿನಾಯಕನ ಪೂಜೆಗಳಲ್ಲಿ ತೊಡಗಿಕೊಂಡಿದ್ದಾರೆ.
.ಶಿವಮೊಗ್ಗ | ಗಣೇಶ ಉತ್ಸವ: ಪೆಂಡಾಲ್ನಲ್ಲಿ ಅರಳಿದ ಕ್ರೀಡಾ ಲೋಕ....ಗಣೇಶ ಚತುರ್ಥಿ: ದಸರಾ ಆನೆಗಳಿಗೆ 'ಗಜಪೂಜೆ'.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.