ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಪದವಿ ಪ್ರಮಾಣ ಪತ್ರಗಳ ನೈಜತೆಯನ್ನು ತಾವೇ ಸಾಬೀತು ಮಾಡಬೇಕಿದ್ದು, ಅದಕ್ಕೆ ತಗಲುವ ವೆಚ್ಚವನ್ನೂ ಅವರೇ ಭರಿಸಲು ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.

ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಲೇಜು ಶಿಕ್ಷಣ ಇಲಾಖೆ ಬಳಸಿಕೊಳ್ಳುತ್ತಾ ಬಂದಿದೆ. ಸ್ನಾತಕೋತ್ತರ ಪದವಿಯಲ್ಲಿ ಶೇ 55 ಅಂಕ ಪಡೆದವರನ್ನು ಸ್ಥಳೀಯ ಬೋಧನಾ ಅಗತ್ಯಕ್ಕೆ ಅನುಗುಣವಾಗಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ನಂತರ ಯುಜಿಸಿ ನಿಯಮಗಳಿಗೆ ಅನುಗುಣವಾಗಿ ಇತರೆ ಅರ್ಹತೆಗಳನ್ನೂ ಪರಿಗಣಿಸಲಾಗುತ್ತಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿ ಕೆಲಸ ಮಾಡುವವರು ಸ್ನಾತಕೋತ್ತರ ಪದವಿಯ ಜತೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಇಲ್ಲವೇ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ತೇರ್ಗಡೆಯಾಗಿರಬೇಕು, ಪಿಎಚ್.ಡಿ ಪಡೆದಿರಬೇಕು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯಮ ರೂಪಿಸಿದೆ. ಪ್ರಥಮ ದರ್ಜೆ ಕಾಲೇಜುಗಳಲ್ಲೂ ಇಂತಹ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ. ಈ ಪ್ರಕರಣ ಕೋರ್ಟ್ ವಿಚಾರಣೆಯಲ್ಲಿದ್ದು, ಅಂತಿಮ ತೀರ್ಪಿಗೆ ಒಳಪಟ್ಟು 2025–26ನೇ ಸಾಲಿನ ಸೆಮಿಸ್ಟರ್ಗೆ ಹಿಂದಿನ ವರ್ಷ ಕೆಲಸ ಮಾಡಿದ್ದ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸಲಾಗಿದೆ. ಹೀಗೆ ಮುಂದುವರಿಸುವಾಗ ಹಲವು ನಿಬಂಧನೆಗಳನ್ನು ವಿಧಿಸಲಾಗಿದೆ.

ರಾಜ್ಯದ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಶೈಕ್ಷಣಿಕ ದಾಖಲೆಗಳನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರು ಪರಿಶೀಲಿಸಬೇಕು. ವಿದ್ಯಾರ್ಹತೆ ಪ್ರಮಾಣಪತ್ರಗಳು, ಕಲ್ಯಾಣ ಕರ್ನಾಟಕ ಮೀಸಲಾತಿ, ಸೇವಾ ಪ್ರಮಾಣಪತ್ರ ಸೇರಿದಂತೆ ಎಲ್ಲ ಮೂಲದಾಖಲೆಗಳನ್ನು ಪರಿಶೀಲಿಸಿ, ದೃಢಪಡಿಸಿಕೊಳ್ಳಬೇಕು. ಸ್ನಾತಕೋತ್ತರ ಪದವಿಗಳ ಅಂಕಪಟ್ಟಿ, ಘಟಿಕೋತ್ಸವ ಪ್ರಮಾಣಪತ್ರ, ಪಿಎಚ್.ಡಿ, ಎಂ.ಫಿಲ್, ಕೆ–ಸೆಟ್, ಎನ್ಇಟಿಗಳ ನೈಜತೆಯನ್ನು ಅತಿಥಿ ಉಪನ್ಯಾಸಕರೇ ದೃಢೀಕರಿಸಬೇಕು. ಅದಕ್ಕೆ ತಗಲುವ ಖರ್ಚನ್ನು ಅವರೇ ಭರಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಹೇಳಿದೆ.

‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರು ನಕಲಿ ದಾಖಲೆಗಳನ್ನು ಸಲ್ಲಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹಾಗಾಗಿ, ಅವರ ಎಲ್ಲ ಶೈಕ್ಷಣಿಕ ದಾಖಲೆಗಳ ನೈಜತಾ ಪ್ರಮಾಣಪತ್ರವನ್ನು ಸಂಬಂಧಿಸಿದ ವಿಶ್ವವಿದ್ಯಾಲಯಗಳಿಂದ ಒಂದು ಬಾರಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಸಲ್ಲಿಸಿದ ನೈಜತಾ ಪ್ರಮಾಣ ಪತ್ರಗಳನ್ನು ಇಲಾಖೆಯ ಇಎಂಐಎಸ್ ತಂತ್ರಾಂಶದಲ್ಲಿ ಆಯಾ ಕಾಲೇಜುಗಳ ಪ್ರಾಂಶುಪಾಲರು ದಾಖಲಿಸಬೇಕು. ಮುಂದಿನ ಶೈಕ್ಷಣಿಕ ವರ್ಷಕ್ಕೆ ಅವರೇ ಮುಂದುವರಿದರೆ ಮತ್ತೆ ನೈಜತೆಯ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ’ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಕೆ.ಎನ್.ಮಂಜುಶ್ರೀ ಸೂಚಿಸಿದ್ದಾರೆ.

ನೈಜತೆಯ ಪ್ರಮಾಣ ಪತ್ರವೂ ನಕಲಿ?

ಅತಿಥಿ ಉಪನ್ಯಾಸಕರ ಶೈಕ್ಷಣಿಕ ದಾಖಲೆಗಳ ನೈಜತೆಯ ಪರಿಶೀಲನೆಯನ್ನು ಕಾಲೇಜು ಶಿಕ್ಷಣ ಇಲಾಖೆ 2017ರಲ್ಲಿ ನಡೆಸಿತ್ತು. ಅದಕ್ಕೆ ತಗಲುವ ವೆಚ್ಚವನ್ನೂ ಇಲಾಖೆಯೇ ಭರಿಸಿತ್ತು. 23 ಅಭ್ಯರ್ಥಿಗಳು ಪಡೆದಿದ್ದ ಪಿಎಚ್.ಡಿ
ಪ್ರಮಾಣಪತ್ರಗಳು ನಕಲಿ ಎನ್ನುವುದು ಪತ್ತೆಯಾಗಿತ್ತು. ಅವರ ವಿರುದ್ಧ ಇಲಾಖೆಯ ಅಧಿಕಾರಿಗಳೇ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ‘ಈ ಬಾರಿ ದಾಖಲೆಗಳ ನೈಜತಾ ಪ್ರಮಾಣ ಪತ್ರ ಪಡೆಯುವ ಜವಾಬ್ದಾರಿಯನ್ನು ಅತಿಥಿ ಉಪನ್ಯಾಸಕರಿಗೇ ನೀಡಿದ್ದು, ಕೆಲವರು ನೀಡಿದ ನೈಜತಾ ಪ್ರಮಾಣ ಪತ್ರಗಳೇ ನಕಲಿಯಾಗಿವೆ. ಅವುಗಳನ್ನು ದೃಢಪಡಿಸಿಕೊಳ್ಳಲು ನಮಗೆ ಅಧಿಕಾರ ಇಲ್ಲ. ಒಂದು ವೇಳೆ ಇಲಾಖೆಯೇ ಆ ಕೆಲಸ ಮಾಡಿದ್ದರೆ ಸಾಕಷ್ಟು ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಿತ್ತು’ ಎನ್ನುತ್ತಾರೆ ಹೆಸರು ಹೇಳಲು ಬಯಸದ ಪ್ರಾಂಶುಪಾಲರೊಬ್ಬರು.

ಆರ್ಥಿಕ ಹೊರೆ; ಅತಿಥಿಗಳ ಆಕ್ಷೇಪ

ಕಾಲೇಜು ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಅತಿಥಿ ಉಪನ್ಯಾಸಕರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

‘ಸ್ನಾತಕೋತ್ತರ ಪದವಿಯ ಅಂಕಪಟ್ಟಿ, ಘಟಿಕೋತ್ಸವ ಪ್ರಮಾಣಪತ್ರ, ಪಿಎಚ್.ಡಿ, ಎಂ.ಫಿಲ್, ಎನ್ಇಟಿ ಅಥವಾ ಕೆ–ಸೆಟ್ಗಳ ನೈಜತೆ ದೃಢೀಕರಿಸಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಆದರೆ, ಪ್ರತಿಯೊಂದು ದಾಖಲೆಯ ನೈಜತಾ ಪ್ರಮಾಣಪತ್ರಕ್ಕೆ ಆಯಾ ವಿಶ್ವವಿದ್ಯಾಲಯಗಳು ದುಬಾರಿ ಶುಲ್ಕ ನಿಗದಿ ಮಾಡಿವೆ. ಇದು ಕಡಿಮೆ ಗೌರವಧನ ಪಡೆಯುವ ಅತಿಥಿ ಉಪನ್ಯಾಸಕರಿಗೆ ಹೊರೆಯಾಗುತ್ತದೆ’ ಎನ್ನುತ್ತಾರೆ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಅಧ್ಯಕ್ಷ ಎಚ್.ಸೋಮಶೇಖರ ಶಿಮೊಗ್ಗಿ.

‘ಶೈಕ್ಷಣಿಕ ದಾಖಲೆಗಳ ನೈಜತೆಯ ಪ್ರಮಾಣಪತ್ರ ಪಡೆಯಲು ₹11,500 ಖರ್ಚಾಗಿದೆ. ಮರು ಆಯ್ಕೆಗೊಂಡ ನಂತರ ಇದುವರೆಗೆ ಗೌರವಧನ ಪಡೆದಿಲ್ಲ. ಮೊದಲೇ ಸಂಕಷ್ಟದಲ್ಲಿ ಇದ್ದೇವೆ. ಸರ್ಕಾರ ಮತ್ತಷ್ಟು ಹೊರೆ ಮಾಡಿದೆ’ ಎಂದು ಅತಿಥಿ ಉಪನ್ಯಾಸಕಿ ಶೈಲಾ ದೂರಿದರು.

ಅತಿಥಿ ಉಪನ್ಯಾಸಕರ ನೈಜತಾ ಪ್ರಮಾಣಪತ್ರವನ್ನು ಇಲಾಖೆಯೇ ತೆಗೆದುಕೊಳ್ಳಬೇಕು. ಈಗ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು. ಈಗಾಗಲೇ ಕೆಲವರು ಭರಿಸಿರುವ ಮೊತ್ತವನ್ನು ವಾಪಸ್ ನೀಡಬೇಕು.
- ಎಚ್.ಸೋಮಶೇಖರ ಶಿಮೊಗ್ಗಿ, ಅಧ್ಯಕ್ಷ, ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.