ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪತಗುಡ್ಡ ಅಭಯಾರಣ್ಯ: ಚಿನ್ನದ ಗಣಿಗಾರಿಕೆ ಪ್ರಸ್ತಾವ ತಿರಸ್ಕರಿಸಲು ಶಿಫಾರಸು

ಗಣಿಗಾರಿಕೆಗೆ ಅರಣ್ಯ ಇಲಾಖೆಯಿಂದ ಶಾಶ್ವತ ತಡೆ
Last Updated 30 ಆಗಸ್ಟ್ 2022, 20:07 IST
ಅಕ್ಷರ ಗಾತ್ರ

ಬೆಂಗಳೂರು: ಕಪ್ಪತಗುಡ್ಡ ಅಭಯಾರಣ್ಯದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಅರಣ್ಯ ಭೂಮಿ ಪರಿವರ್ತನೆಗೆಸಲ್ಲಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮೇಲಾಧಿಕಾರಿಗೆ ಶಿಫಾರಸು ಮಾಡಿದ್ದಾರೆ.

ಈ ಕುರಿತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂರಕ್ಷಣೆ) ಹಾಗೂ ನೋಡಲ್ ಅಧಿಕಾರಿ (ಅರಣ್ಯ ಸಂರಕ್ಷಣಾ ಕಾಯ್ದೆ) ಅವರು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಇದರೊಂದಿಗೆ ಕಪ್ಪತಗುಡ್ಡ ಅಭಯಾರಣ್ಯದಲ್ಲಿ ಗಣಿಗಾರಿಕೆಗೆ ಶಾಶ್ವತ ತಡೆ ಬಿದ್ದಂತಾಗಿದ್ದು

ಬಳ್ಳಾರಿ ಜಿಲ್ಲೆಯ ರಾಮಗಢ ಮೈನ್ಸ್ ಮತ್ತು ಮಿನೆರಲ್ಸ್ ಕಂಪನಿ ಯವರು ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನಜೆಲ್ಲಿಗೇರಿ ಗ್ರಾಮದ ಸರ್ವೇ ಸಂಖ್ಯೆ 45, 49 ಹಾಗೂ 50ರಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಅಂದಾಜು 39 ಹೆಕ್ಟೇರ್ ಅರಣ್ಯ ಭೂಮಿ ಪರಿವರ್ತನೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಗಣಿಗಾರಿಕೆ ನಡೆಸಲು ಕೋರಿದ ಪ್ರದೇಶವು ಕಪ್ಪತಗುಡ್ಡ ಅಭಯಾರಣ್ಯದ ವ್ಯಾಪ್ತಿಯ ಒಳಗೆ ಬರುವ ಕಾರಣದಿಂದ ಗಣಿಗಾರಿಕೆಯಿಂದ ಪರಿಸರದ ಮೇಲೆ ಆಗಬಹುದಾದ ಕೆಟ್ಟ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಗಣಿಗಾರಿಕೆ ಪ್ರಸ್ತಾವನೆಯನ್ನು ತಿರಸ್ಕರಿಸುವಂತೆ ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂರಕ್ಷಣೆ) ಹಾಗೂ ನೋಡಲ್ ಅಧಿಕಾರಿ (ಅರಣ್ಯ ಸಂರಕ್ಷಣಾ ಕಾಯ್ದೆ) ಅವರಿಗೆ ಶಿಫಾರಸು ಮಾಡಿದ್ದರು. ಈ ಶಿಫಾರಸನ್ನು ಅನುಮೋದಿಸಿದ ನೋಡಲ್ ಅಧಿಕಾರಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಅವರು, ಪ್ರಸ್ತಾವನೆಯನ್ನು ತಿರಸ್ಕರಿಸುವಂತೆ 2021ರ ಮೇ ತಿಂಗಳಲ್ಲೇ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಆದರೆ ಅರಣ್ಯ ಇಲಾಖೆಯ ಶಿಫಾರಸನ್ನು ಪ್ರಶ್ನಿಸಿ ರಾಮಗಢ ಮೈನ್ಸ್ ಕಂಪನಿಯವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ 2021ರ ಜುಲೈ 15ರಂದು ಮನವಿ ಸಲ್ಲಿಸಿ ಅರಣ್ಯ ಇಲಾಖೆಯ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೋರಿದ್ದರು.

ಗಣಿಗಾರಿಕೆಗೆ ಕೋರಿರುವ ಅರಣ್ಯ ಪ್ರದೇಶವು ಕಪ್ಪತಗುಡ್ಡ ಅಭಯಾರಣ್ಯದ ಒಟ್ಟು ಪ್ರದೇಶದ ಶೇ 0.5 ಭಾಗವೂ ಇರುವುದಿಲ್ಲ. ಗಣಿಗಾರಿಕೆಗಾಗಿ ಮಾಡುವ ಆಳದ ಗುಂಡಿಗಳಿಂದ ಅಂತರ್ಜಲ ವೃದ್ಧಿಯಾಗುತ್ತದೆ ಎನ್ನುವ ಕಾರಣವನ್ನು ಕಂಪನಿ ನೀಡಿತ್ತು.

ಇದರ ಜೊತಯಲ್ಲಿ ಅರಣ್ಯ ಅಧಿಕಾರಿ ಗಳು ಕಪ್ಪತಗುಡ್ಡದಲ್ಲಿ ಇರುವುದಾಗಿ ಉಲ್ಲೇಖಿಸಿರುವ ವನ್ಯಜೀವಿಗಳು ಸಾಮಾನ್ಯ ಜಾತಿಗೆ ಸೇರಿದವಾಗಿದ್ದು, ಇವು ರಾಜ್ಯದಲ್ಲಿ ವಿಫುಲವಾಗಿವೆ. ಗಣಿಗಾರಿಕೆಗೆ ಕೋರಿರುವ ಪ್ರದೇಶದಲ್ಲಿ ಈ ಹಿಂದೆ ಬ್ರಿಟಿಷರು ಸಹ ಗಣಿಗಾರಿಕೆ ಮಾಡಿದ್ದಾರೆ ಎನ್ನುವ ಮನವಿಯನ್ನು ಕಂಪನಿ ಮಾಡಿತ್ತು.

ರಾಮಗಢ ಮೈನ್ಸ್‌ ಮಾಡಿರುವ ಮನವಿಯನ್ನು ಪುನರ್ ಪರಿಶೀಲಿಸಿ ಎಂದು ಅರಣ್ಯ ಇಲಾಖೆಗೆ ಸೂಚಿಸ ಲಾಗಿತ್ತು. ಸಂಸ್ಥೆಯ ಮನವಿಯನ್ನು ಪುನರ್ ಪರಿಶೀಲಿಸಿದ್ದ ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಪ್ರತಿಯೊಂದು ಆಕ್ಷೇಪಣೆಗೂ ವಿವರ ವಾದ ಉತ್ತರವನ್ನು ನೀಡಿದ್ದಾರೆ.

‘ಗಣಿಗಾರಿಕೆಗೆ ಕೇಳಿರುವ ಪ್ರದೇಶವು ಅಭಯಾರಣ್ಯದ ಹೃದಯ ಭಾಗದಲ್ಲಿದ್ದು, ಅನುಮತಿ ನೀಡಿದರೆ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಸರಿಪಡಿಸಲಾಗದಂತಹ ಹಾನಿಯಾಗಲಿದೆ. ಅಲ್ಲದೆ 2022ರ ಜೂನ್‌ನಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಪ್ರಕಾರ ರಾಷ್ಟ್ರೀಯ ಉದ್ಯಾನ ಮತ್ತು ಅಭಯಾರಣ್ಯದ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವಂತಿಲ್ಲ. ಅಂತರ್ಜಲ ವೃದ್ಧಿಸಲು ಗಣಿಗಾರಿಕೆಯ ಅವಶ್ಯಕತೆಯಿಲ್ಲ. ಬದಲಿಗೆ ಅರಣ್ಯ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳು ತ್ತಿದೆ. ಅಲ್ಲದೆ ಅಭಯಾರಣ್ಯದಲ್ಲಿ ತೋಳ, ಕೃಷ್ಣಮೃಗ, ಕತ್ತೆಕಿರುಬ, ಕೊಂಡುಕುರಿಯಂತಹ ವನ್ಯಜೀವಿಗಳಿವೆ ಎನ್ನುವುದು ಕ್ಯಾಮರಾ ಟ್ರ್ಯಾಪ್ ಮೂಲಕ ದೃಢವಾಗಿದೆ‘ ಎಂದುಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹೇಳಿದ್ದಾರೆ.

ಈ ಶಿಫಾರಸನ್ನು ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂರಕ್ಷಣೆ) ಅವರು ಸಹ ಅನುಮೋದಿಸಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ತಿಳಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿದ್ದಾರೆ. ಇದರಿಂದಾಗಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಚಿನ್ನದ ಗಣಿಗಾರಿಕೆಗೆ ಬಹುತೇಕ ತಡೆ ಬಿದ್ದಂತಾಗಿದೆ.

*

ಅರಣ್ಯ ಇಲಾಖೆಯ ಶಿಫಾರಸು ಸುಪ್ರೀಂ ಕೋರ್ಟ್‌ ತೀರ್ಪಿಗೆ ಹಾಗೂ ವನ್ಯಜೀವಿ ಸಂರಕ್ಷಣೆಗೆ ಪೂರಕವಾಗಿದೆ. ಇದು ಗಣಿಗಾರಿಕೆ ವಿರುದ್ಧ ಹೋರಾಡುತ್ತಿದ್ದ ತೋಂಟ ದಾರ್ಯ ಶ್ರೀಗಳಿಗೆ ಸಂದ ಜಯ.
–ಗಿರಿಧರ ಕುಲಕರ್ಣಿ,ವನ್ಯಜೀವಿ ಸಂರಕ್ಷವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT