ಬೆಂಗಳೂರು: ರಾಜ್ಯ ಗುಪ್ತಚರ ವಿಭಾಗದ ಎಡಿಜಿಪಿ ಹುದ್ದೆಗೆ ಚಂದ್ರಗುಪ್ತ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವರ್ಗಾವಣೆ ಮಾಡಿದೆ.

ಈಶಾನ್ಯ ವಲಯದ ಐಜಿಪಿ ಹುದ್ದೆಗೆ ಮೂರು ದಿನಗಳ ಹಿಂದಷ್ಟೇ ವರ್ಗಾವಣೆ ಮಾಡಲಾಗಿತ್ತು. ಆದೇಶ ಮಾರ್ಪಡಿಸಿ, ರಾಜ್ಯ ಗುಪ್ತಚರ ವಿಭಾಗಕ್ಕೆ ವರ್ಗಾವಣೆ ಮಾಡಿದೆ. ಅದೇ ಹುದ್ದೆಯಲ್ಲಿದ್ದ ಐಜಿಪಿ ವೈ.ಎಸ್. ರವಿಕುಮಾರ್ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ಶಂತನು ಸಿನ್ಹಾ ಅವರನ್ನು ಸಿಐಡಿಯಿಂದ ಈಶಾನ್ಯ ವಲಯದ ಐಜಿಪಿಯಾಗಿ, ಕರಾವಳಿ ಭದ್ರತಾ ಪಡೆಯ ಎಸ್ಪಿ ಎಚ್.ಎನ್. ವಿಥುನ್ ಅವರನ್ನು ಮಂಗಳೂರು ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಪರಸ್ಪರ ವರ್ಗಾವಣೆಯಾಗಿದ್ದ ಮೂರು ಆದೇಶಗಳನ್ನು ರದ್ದು ಮಾಡಿ, ಸಿಮಿ ಮರಿಯಂ ಜಾರ್ಜ್ ಅವರನ್ನು ವಿಧಿವಿಜ್ಞಾನ ಪ್ರಯೋಗಾಲಯದ ಜಂಟಿ ನಿರ್ದೇಶಕರಾಗಿ, ಗೋಪಾಲ್ ಎಂ. ಬ್ಯಾಕೋಡ್ ಅವರನ್ನು ಬೆಂಗಳೂರು ದಕ್ಷಿಣ ಸಂಚಾರ ವಿಭಾಗದ ಡಿಸಿಪಿಯಾಗಿ, ಜಿತೇಂದ್ರಕುಮಾರ್ ದಯಾಮ ಅವರನ್ನು ನಕ್ಸಲ್ ನಿಗ್ರಹ ಪಡೆಯ ಎಸ್ಪಿ ಸ್ಥಾನದಲ್ಲೇ ಮುಂದುವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.