ನವದೆಹಲಿ: ಪ್ರಧಾನಮಂತ್ರಿ ಜನ ಧನ ಯೋಜನೆಯಡಿ ಕರ್ನಾಟಕದಲ್ಲಿ ತೆರೆಯಲಾಗಿದ್ದ ₹2.08 ಕೋಟಿ ಖಾತೆಗಳ ಪೈಕಿ 54 ಲಕ್ಷ ಖಾತೆಗಳು ನಿಷ್ಕ್ರಿಯ ಆಗಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಲೋಕಸಭೆಗೆ ಸೋಮವಾರ ತಿಳಿಸಿದೆ.

ದೇಶದಲ್ಲಿ ಜುಲೈ 31ರವರೆಗೆ ಒಟ್ಟು 56.04 ಕೋಟಿ ಜನ ಧನ ಖಾತೆಗಳನ್ನು ತೆರೆಯಲಾಗಿದೆ. ಈ ಪೈಕಿ, ₹13.04 ಲಕ್ಷ ಖಾತೆಗಳು ನಿಷ್ಕ್ರಿಯವಾಗಿವೆ. ಭಾರತೀಯ ರಿಸರ್ವ್ ಬ್ಯಾಂಕ್ 2009ರಲ್ಲಿ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಖಾತೆಯಲ್ಲಿ ಯಾವುದೇ ವಹಿವಾಟು ನಡೆಯದಿದ್ದರೆ ಉಳಿತಾಯ ಖಾತೆಯನ್ನು ನಿಷ್ಕ್ರಿಯ ಎಂದು ಪರಿಗಣಿಸಬೇಕು ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಸದನಕ್ಕೆ ತಿಳಿಸಿದರು.

ನೇರ ನಗದು ವರ್ಗಾವಣೆಯಂತಹ ಸರ್ಕಾರದ ವಿವಿಧ ಯೋಜನೆಗಳ ಮೊತ್ತವನ್ನು ಜನ ಧನ ಖಾತೆ ಸೇರಿದಂತೆ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈ ಮೊತ್ತವನ್ನು ನಿಷ್ಕ್ರಿಯ ಖಾತೆಗಳಿಗೂ ವರ್ಗಾಯಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಖಾತೆ ನಿಷ್ಕ್ರಿಯಗೊಳ್ಳುವ ಬಗ್ಗೆ ಬ್ಯಾಂಕುಗಳು ಖಾತೆದಾರರಿಗೆ ಪತ್ರಗಳು, ಇಮೇಲ್ ಅಥವಾ ಎಸ್ಎಂಎಸ್ ಮೂಲಕ ಲಿಖಿತವಾಗಿ ಮಾಹಿತಿ ನೀಡುತ್ತವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.