ಬೆಂಗಳೂರು: ರಾಜ್ಯ ಹೈಕೋರ್ಟ್ ಬೆಂಗಳೂರು ಪ್ರಧಾನಪೀಠ, ಧಾರವಾಡ ಮತ್ತು ಕಲಬುರಗಿ ಸೇರಿದಂತೆ ಒಟ್ಟು ಮೂರೂ ಪೀಠಗಳಲ್ಲಿನ ಹಾಲಿ 43 ನ್ಯಾಯಮೂರ್ತಿಗಳಲ್ಲಿ, ಪ್ರಕರಣಗಳ ವಿಲೇವಾರಿಯಲ್ಲಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಅಗ್ರೇಸರ ಎನಿಸಿದ್ದಾರೆ.

ದೇಶದ ವಿವಿಧ ಹೈಕೋರ್ಟ್ಗಳ ನ್ಯಾಯಮೂರ್ತಿಗಳ ವಿಲೇವಾರಿ ವೇಗದಲ್ಲಿ ಅಗ್ರಪಂಕ್ತಿ ಕಾಪಾಡಿಕೊಂಡಿರುವ ಅವರು ಸೋಮವಾರ ಬೆಳಿಗ್ಗೆ 10.30ರಿಂದ ಸಂಜೆ 7.15ರವರೆಗೆ 535 ಅರ್ಜಿಗಳ ವಿಚಾರಣೆ ನಡೆಸಿದರು.

ರಿಟ್, ಕ್ರಿಮಿನಲ್, ಸಿವಿಲ್, ಕೌಟುಂಬಿಕ, ವಿವಿಧ ಪ್ರಾಧಿಕಾರಗಳೂ ಸೇರಿದಂತೆ ಹೊಸ ಮುಖ್ಯ ನ್ಯಾಯಮೂರ್ತಿಗಳು ಬಂದ ಮೇಲೆ ತೆರಿಗೆ ಪ್ರಕರಣಗಳನ್ನೂ ಇವರ ಹೆಗಲಿಗೆ ವರ್ಗಾಯಿಸಲಾಗಿದೆ. ಎಲ್ಲ ಪ್ರಕಾರಗಳಲ್ಲೂ ತೀಕ್ಷ್ಣ ಮತ್ತು ತೀವ್ರ ವೇಗದಲ್ಲಿ ವಿಲೇವಾರಿಯ ಚಾಣಾಕ್ಷತೆ ಹೊಂದಿರುವ ನ್ಯಾ.ನಾಗಪ್ರಸನ್ನ ಅವರು ಸೋಮವಾರ ವಿಚಾರಣೆ ನಡೆಸಿದ 535 ಅರ್ಜಿಗಳಲ್ಲಿ 66 ಅರ್ಜಿಗಳನ್ನು ವಿಲೇವಾರಿ ಮಾಡಿದರು.

ಈ ಮೂಲಕ ಅವರು ನ್ಯಾಯಮೂರ್ತಿಯಾಗಿ ನೇಮಕಗೊಂಡ 2019ರ ನವೆಂಬರ್ 11ರಿಂದ ಈತನಕ ಒಟ್ಟು 22 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿರುವ ಹೆಗ್ಗಳಿಕೆ ಹೊಂದಿದ್ದಾರೆ. ಈ ಬಾರಿಯ ರೋಸ್ಟರ್ನಲ್ಲಿ ಅಂದರೆ 2025ರ ಜುಲೈ 28ರಿಂದ ಸೋಮವಾರದವರೆಗೆ ವಿವಿಧ ನಮೂನೆಯ ವರ್ಗಗಳಲ್ಲಿನ 1,046 ಅರ್ಜಿಗಳು ಇತ್ಯರ್ಥಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.