ಸಮೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗೃಹಬಳಕೆ ವಿದ್ಯುತ್ ಮೀಟರ್ ಸಂಪರ್ಕ ಆಧರಿಸಿ 2 ಕೋಟಿಗೂ ಹೆಚ್ಚು ಮನೆಗಳನ್ನು ಗುರುತಿಸಿ ಜಿಯೋಟ್ಯಾಗಿಂಗ್ ಮಾಡಿ ಗಣತಿಯ ಬ್ಲಾಕ್‌ನ ನಕ್ಷೆ ರೂಪಿಸುವ ಕಾರ್ಯ ಪೂರ್ಣಗೊಂಡಿದೆ. ಇದರಿಂದ ಗಣತಿದಾರರು ಸುಲಭವಾಗಿ ಮನೆಗಳನ್ನು ತಲುಪಿ ಸಮೀಕ್ಷೆ ನಡೆಸಲು ನೆರವಾಗಲಿದೆ. ಒಬ್ಬ ಗಣತಿದಾರನಿಗೆ 140ರಿಂದ 150 ಮನೆಗಳನ್ನು ಹೊಂದಿರುವ ಬ್ಲಾಕ್ ಹಂಚಿಕೆ ಮಾಡಲಾಗಿದೆ. 1.75 ಲಕ್ಷ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಮಧುಸೂದನ್ ಆರ್. ನಾಯ್ಕ್, ಅಧ್ಯಕ್ಷರು, ಹಿಂದುಳಿದ ವರ್ಗಗಳ ಆಯೋಗ