ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಶ್ವಾಸಕ್ಕೆ ಶೇ 33ರಷ್ಟು ಸದಸ್ಯರ ನಿರ್ಣಯ: ಕಾರಣ ಬೇಕಿಲ್ಲ–ಹೈಕೋರ್ಟ್‌

Published 16 ಮೇ 2023, 20:57 IST
Last Updated 16 ಮೇ 2023, 20:57 IST
ಅಕ್ಷರ ಗಾತ್ರ

ಬೆಂಗಳೂರು: ‘ಸಹಕಾರ ಸಂಘಗಳ ಅಧ್ಯಕ್ಷ ಮತ್ತು ಪದಾಧಿಕಾರಿಗಳ ವಿರುದ್ಧ ಶೇ 33ರಷ್ಟು ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದಕ್ಕೆ ಕಾರಣ ನೀಡುವ ಅಗತ್ಯವಿಲ್ಲ. ಆದರೆ, ನಿಯಮಾನುಸಾರ 15 ದಿನಗಳ ಮುಂಚಿತವಾಗಿ ನೋಟಿಸ್ ನೀಡಿದರೆ ಸಾಕು‘ ಎಂದು ಹೈಕೋರ್ಟ್ ಆದೇಶಿಸಿದೆ. 

ಈ ಕುರಿತಂತೆ ಬೆಳಗಾವಿಯ ಶ್ರೀ ಮಲಪ್ರಭ ಸಹಕಾರಿ ಸಕ್ಕರೆ ಕಾರ್ಖಾನೆ ಸೊಸೈಟಿ ಅಧ್ಯಕ್ಷ ನಾಸಿರುದ್ದೀನ್ ಭಗವಾನ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದ್ದು, ’ಒಂದು ವೇಳೆ ಮೂರನೇ ಒಂದರಷ್ಟು ಅಂದರೆ ಶೇ 33ರಷ್ಟು ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದರೆ, ಯಾವುದೇ ಕಾರಣ ನೀಡುವ ಅಗತ್ಯವಿಲ್ಲ‘ ಎಂದು ಸ್ಪಷ್ಟಪಡಿಸಿದೆ.

‘ಸೊಸೈಟಿಯ ಸದಸ್ಯರು ಮಂಡಿಸಿರುವ ಅವಿಶ್ವಾಸ ನಿರ್ಣಯದ ಕುರಿತು ರಿಜಿಸ್ಟ್ರಾರ್ ತೃಪ್ತರಾದರೆ ಸಾಕು. ಯಾರ ವಿರುದ್ಧ ಅವಿಶ್ವಾಸ ಮಂಡಿಸಲಾಗಿದೆಯೋ ಅಂತಹವರೂ ಸೇರಿದಂತೆ ಎಲ್ಲ ಸದಸ್ಯರಿಗೆ 15 ದಿನಗಳ ಮುಂಚಿತವಾಗಿಯೇ ನೋಟಿಸ್ ನೀಡಿ ನಿಯಮ ಪಾಲಿಸಬೇಕಾಗುತ್ತದೆ. ನೋಟಿಸ್ ನೀಡಿದ ನಂತರ ಯಾರ ವಿರುದ್ಧ ಅವಿಶ್ವಾಸ ಮಂಡಿಸಲಾಗಿರುತ್ತದೆಯೋ ಅಂತಹವರು ಇಚ್ಚಿಸಿದರೆ ಇತರೆ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಭೇಟಿ ಮಾಡಿ ನೋಟಿಸ್ ವಾಪಸ್ ಪಡೆಯಲು ಮನವೊಲಿಸಬಹುದು‘ ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.

ಪ್ರಕರಣವೇನು?: ಶ್ರೀ ಮಲಪ್ರಭ ಸಹಕಾರಿ ಸಕ್ಕರೆ ಕಾರ್ಖಾನೆ ಸೊಸೈಟಿ ಅಧ್ಯಕ್ಷ ನಾಸೀರುದ್ದೀನ್ ಭಗವಾನ್ ವಿರುದ್ಧ 2023ರ ಮಾರ್ಚ್‌ನಲ್ಲಿ 9 ಸದಸ್ಯರು ಅವಿಶ್ವಾಸ ಮಂಡನೆ ನಿರ್ಣಯ ನೋಟಿಸ್ ಕಳುಹಿಸಿದ್ದರು. ಈ ನಿಟ್ಟಿನಲ್ಲಿ ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಲು ಅಧಿಕಾರಿ ನಿಯೋಜನೆಗಾಗಿ 7 ದಿನಗಳಿಗೂ ಹೆಚ್ಚು ಕಾಲ ತೆಗೆದುಕೊಂಡಿದ್ದಾರೆ. ನನಗೆ ನೋಟಿಸ್ ಪ್ರತಿಯನ್ನು ನೀಡಿಲ್ಲ ಹಾಗೂ ಕಾರಣವನ್ನೂ ಉಲ್ಲೇಖಿಸಿಲ್ಲ ಎಂದು ಆಕ್ಷೇಪಿಸಿದ್ದ ನಾಸಿರುದ್ದೀನ್‌, ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT