ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, 2025–26ನೇ ಸಾಲಿನ ವೈದ್ಯಕೀಯ ಕೋರ್ಸ್ಗಳ ಶುಲ್ಕದ ವಿವರವನ್ನು ಪ್ರಕಟಿಸಿದೆ.

ಸರ್ಕಾರಿ ಕಾಲೇಜುಗಳ, ಖಾಸಗಿ ಕಾಲೇಜುಗಳ ಸರ್ಕಾರಿ ಕೋಟಾ ಮತ್ತು ಖಾಸಗಿ ಸೀಟುಗಳಿಗೆ ಈ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಇದ್ದಷ್ಟೇ ವಾರ್ಷಿಕ ಶುಲ್ಕವನ್ನು, ಈ ಸಾಲಿಗೂ ಮುಂದುವರೆಸಿದೆ.

ವಿಶ್ವವಿದ್ಯಾಲಯಗಳ ನೋಂದಣಿ ಶುಲ್ಕ ಸೇರಿ, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸೀಟುಗಳಿಗೆ ₹64,350 ಶುಲ್ಕ ನಿಗದಿ ಮಾಡಲಾಗಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳಿಗೆ ₹1.53 ಲಕ್ಷ ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಖಾಸಗಿ ಕಾಲೇಜುಗಳ ಖಾಸಗಿ ಕೋಟಾದ ಸೀಟುಗಳಿಗೆ ಈ ಹಿಂದಿನ ಸಾಲಿನಲ್ಲಿದ್ದ ₹12 ಲಕ್ಷ ವಾರ್ಷಿಕ ಶುಲ್ಕವನ್ನೇ, ಈ ಸಾಲಿಗೂ ಉಳಿಸಿಕೊಳ್ಳಲಾಗಿದೆ. ಈ ಸೀಟುಗಳ ಶುಲ್ಕವನ್ನು ಹೆಚ್ಚಿಸುವಂತೆ, ಖಾಸಗಿ ಕಾಲೇಜುಗಳು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಆದರೆ ಈ ಸೀಟುಗಳ ಶುಲ್ಕವನ್ನು ಹೆಚ್ಚಿಸುವುದಿಲ್ಲ ಎಂದು ಸರ್ಕಾರ ಹೇಳಿತ್ತು.

ಮ್ಯಾನೇಜ್ಮೆಂಟ್, ಎನ್ಆರ್ಐ ಸೀಟುಗಳು ತುಟ್ಟಿ: ಖಾಸಗಿ ಕಾಲೇಜುಗಳು ಮ್ಯಾನೇಜ್ಮೆಂಟ್ ಮತ್ತು ಎನ್ಆರ್ಐ ಕೋಟಾ ಸೀಟುಗಳ ಶುಲ್ಕವನ್ನು ಹೆಚ್ಚಿಸಿವೆ. ಈ ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ, ವಿವಿಧ ಕಾಲೇಜುಗಳಲ್ಲಿ ಈ ಸೀಟುಗಳ ಶುಲ್ಕದಲ್ಲಿ ₹1 ಲಕ್ಷದಿಂದ ₹6 ಲಕ್ಷದವರೆಗೆ ಏರಿಕೆಯಾಗಿದೆ.

ಮ್ಯಾನೇಜ್ಮೆಂಟ್ ಮತ್ತು ಎನ್ಆರ್ಐ ಕೋಟಾದ ಸೀಟುಗಳ ವಾರ್ಷಿಕ ಶುಲ್ಕವು ₹45 ಲಕ್ಷವನ್ನು ಮೀರಬಾರದು ಎಂದು ಸರ್ಕಾರವು ತನ್ನ ಆದೇಶದಲ್ಲಿ ಸೂಚಿಸಿತ್ತು. ಆದರೆ ಕೆಲ ಕಾಲೇಜುಗಳಲ್ಲಿ ಶುಲ್ಕವು ಈ ಮಿತಿಗಿಂತಲೂ ಹೆಚ್ಚು ಇದೆ.

ರಾಜ್ಯಕ್ಕೆ ಲಭ್ಯವಿರುವ ಒಟ್ಟು ವೈದ್ಯಕೀಯ ಸೀಟುಗಳಲ್ಲಿ ಶೇ 40ರಷ್ಟು ಸರ್ಕಾರಿ ಕೋಟಾ, ಶೇ 40ರಷ್ಟು ಖಾಸಗಿ ಕೋಟಾ ಸೀಟುಗಳು. ಶೇ 15ರಷ್ಟು ಸೀಟುಗಳನ್ನು ಎನ್ಆರ್ಐ ಕೋಟಾ ಮತ್ತು ಶೇ 5ರಷ್ಟು ಸೀಟುಗಳನ್ನು ಮ್ಯಾನೇಜ್ಮೆಂಟ್ ಕೋಟಾದ ಅಡಿ ಬರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.