ಬೆಳಗಾವಿ: ‘ಸರ್ಕಾರದ ಖಜಾನೆ ಖಾಲಿ’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತಿಗೆ, ತಿರುಗೇಟು ಕೊಟ್ಟ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಅವರು ಕಲೆಕ್ಷನ್ ಕಿಂಗ್, ಅಪ್ಪನ ಹೆಸರು ಕೆಡಿಸಿದ ಅವರ ಕಲೆಕ್ಷನ್ ಎಷ್ಟು ಬಿಚ್ಚಿಡಲಾ’ ಎಂದು ಕಟುವಾಗಿ ಪ್ರಶ್ನಿಸಿದರು.
ಭ್ರಷ್ಟಾಚಾರ ಮಾಡಿ ಪಕ್ಷದ ಹೈಕಮಾಂಡ್ ತೃಪ್ತಿಪಡಿಸುವುದು ಬಿಜೆಪಿ ನಾಯಕರ ಅನುಭವ. ಅವರ ಅನುಭವವನ್ನೇ ವಿಜಯೇಂದ್ರ ಹೇಳಿದ್ದಾರೆ
ಕೆ.ಎನ್.ರಾಜಣ್ಣ, ಶಾಸಕ
ಔಟ್ ಗೋಯಿಂಗ್ ಸಿ.ಎಂ ಎಂದು ವಿಜಯೇಂದ್ರ ಪದೇಪದೇ ಹೇಳುತ್ತಾರೆ ಅಷ್ಟೇ. ಅವರ ಮಾತಿಗೆ ಬೆಲೆ ಕೊಡಬೇಕಾಗಿಲ್ಲ. ಉತ್ತರವನ್ನೂ ಕೊಡುವುದಿಲ್ಲ
ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ
ಅತಂತ್ರ ಸ್ಥಿತಿಯಲ್ಲಿರುವ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮಾಡಿ 15 ದಿನ ಕುರ್ಚಿಯಲ್ಲಿ ಉಳಿದಿದ್ದಾರೆ. ಡಿನ್ನರ್ ಪಾರ್ಟಿ, ಇನ್ನರ್ ಪಾಲಿಟಿಕ್ಸ್ ಇನ್ನೂ ನಿಂತಿಲ್ಲ
ಛಲವಾದಿ ನಾರಾಯಣಸ್ವಾಮಿ, ವಿರೋಧ ಪಕ್ಷದ ನಾಯಕ, ವಿಧಾನ ಪರಿಷತ್ತು
ಪಕ್ಷದ ಹೈಕಮಾಂಡ್ ನಿರ್ಧರಿಸುವವರೆಗೆ ನಾನೇ ಸಿ.ಎಂ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ವಿಪಕ್ಷ ನಾಯಕ ಎಷ್ಟು ದಿನ ಇರುತ್ತಾರೋ ಕೇಳಿನೋಡಿ