ಬೆಂಗಳೂರು: ಕೆಸಾಪ್ಸ್: ಬಾಲಕಿಯರು ‘ಬಲಿ’ ಶೀರ್ಷಿಕೆಯಡಿ‘ಪ್ರಜಾವಾಣಿ’ಯಲ್ಲಿ ಭಾನುವಾರ (ಡಿ.15) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ‘ಲಾಭಕ್ಕಾಗಿ ಹೆಣ್ಣು ಮಕ್ಕಳ ಕೈಯಲ್ಲಿ ಕಾಂಡೋಮ್ ಇಟ್ಟ ಕೆಸಾಪ್ಸ್‌ಗೆ ಮಾನವೀಯತೆ ಇಲ್ಲ. ಮಹಿಳಾ ಸಬಲೀಕರಣ ಎಂದು ಪ್ರತಿಧ್ವನಿಸುವ ಸರ್ಕಾರಗಳೇ ಹೆಣ್ಣು ಮಕ್ಕಳನ್ನು ಅಬಲೆಯರನ್ನಾಗಿ ಮಾಡಿವೆ’ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ಸಂವೇದನಾಹೀನ ಅಧಿಕಾರಿಗಳು

ಕಾರ್ಮಿಕರಲ್ಲಿ ಬಾಲಕಾರ್ಮಿಕರಿದ್ದಂತೆ, ಸೆಕ್ಸ್ ವರ್ಕ್‌ನಲ್ಲಿ ಅಪ್ರಾಪ್ತರಿದ್ದಾರೆ ಎನ್ನುವ ಕೆಸಾಪ್ಸ್ ಅಧಿಕಾರಿಗಳ ವಾದ ವರದಿಯಲ್ಲಿದೆ. ಸಂವೇದನಾಹೀನವಾದ ಇಂಥ ಅಧಿಕಾರಿಗಳು ಅಪ್ರಾಪ್ತರ ದುಡಿಮೆ ಹಾಗೂ ಅಪ್ರಾಪ್ತೆಯರು ಮೈಮಾರಿ ಬದುಕುವುದನ್ನು ಒಂದೇ ತಕ್ಕಡಿಯಲ್ಲಿ ಇಟ್ಟಿದ್ದಾರೆ. ಇದು, ಏಡ್ಸ್ ನಿಯಂತ್ರಣದ ಹೆಸರಿನಲ್ಲಿ ವೇಶ್ಯಾವಾಟಿಕೆಗೆ ಕೆಸಾಪ್ಸ್ ಪ್ರಚೋದನೆ ನೀಡುವಂತಿದೆ. ಕಾಂಡೋಮ್ ಹಂಚುವ ಬದಲು, ಈಗಾಗಲೇ ಅಳವಡಿಸಿರುವ ವೆಂಡಿಂಗ್ ಯಂತ್ರಗಳನ್ನು ವ್ಯಾಪಕಗೊಳಿಸುವುದು ಕ್ಷೇಮಕರ

- ದೇವನೂರ ಮಹಾದೇವ, ಸಾಹಿತಿ

ರಕ್ಷಣೆ ಹೆಸರಲ್ಲಿ ಶೋಷಣೆ

ಸುರಕ್ಷಿತ ಲೈಂಗಿಕತೆಯ ನೆಪದಲ್ಲಿ ಅಮಾಯಕ ಬಾಲಕಿಯರನ್ನು ಕೃತ್ಯದಲ್ಲಿ ಬಳಕೆ ಮಾಡಿಕೊಂಡಿರುವುದು ಅಮಾನವೀಯ ಸಂಗತಿ. ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವುದೆಲ್ಲಾ ಶೋಷಣೆ. ಈ ನರಕದಿಂದ ಹೆಣ್ಣು ಮಕ್ಕಳನ್ನು ಕೂಡಲೇ ಮುಕ್ತಿಗೊಳಿಸಿ.

- ಧನಂಜಯ, ಮಂಡ್ಯ

ಭಕ್ಷಕರಾದ ರಕ್ಷಕ

ಹೆಣ್ಣು ಮಕ್ಕಳನ್ನು ರಕ್ಷಿಸಬೇಕಾದ ಇಲಾಖೆಗಳು ಕಣ್ಣು, ದೃಷ್ಟಿ ಕಳೆದುಕೊಂಡಿವೆ.ಉದ್ಯೋಗದ ನೆಪದಲ್ಲಿ ಹೆಣ್ಣು ಮಕ್ಕಳನ್ನು ಬಲಿಪಶುಗಳನ್ನಾಗಿ ಮಾಡುತ್ತಿರುವುದು ದೇಶವೇ ತಲೆ ತಗ್ಗಿಸುವ ಸಂಗತಿ. ಹೆಣ್ಣಿಗೆ ರಕ್ಷಣೆ ನೀಡುವ ಬದಲಿಗೆ ಹೆಣ್ತನವನ್ನೇ ಭಕ್ಷಿಸುವ ಕ್ರೂರಿಗಳಾಗಿದ್ದಾರೆ.

- ಸತೀಶ್, ದಾವಣಗೆರೆ

ಬಳಕೆ ಏಕೆ?

ಸುರಕ್ಷಿತ ಲೈಂಗಿಕತೆಗೆ ಕಾಂಡೋಮ್ ಅಗತ್ಯ. ಅದನ್ನು ವಿತರಿಸಲು ಹೆಣ್ಣು ಮಕ್ಕಳನ್ನೇ ಬಳಕೆ ಮಾಡಿಕೊಳ್ಳುವ ಅಗತ್ಯ ಏನಿತ್ತು?. ಆಗಬೇಕಿದ್ದು ಏಡ್ಸ್ ನಿಯಂತ್ರಣ. ಆಗಿರುವುದು ಹೆಣ್ಣು ಮಕ್ಕಳ ಮಾನಹರಣ.ಪ್ರತಿ ಹಳ್ಳಿಯಲ್ಲೂ ಸುಲಭವಾಗಿ ಕಾಂಡೋಮ್ ಲಭ್ಯವಾಗುವಂತೆ ವ್ಯವಸ್ಥೆ ಮಾಡಬಹುದಿತ್ತು.

- ಶ್ರೀಶೈಲ ಬಿರಾದಾರ, ಯಾದಗಿರಿ

ಅಧಿಕಾರಿಗಳೇ ವಿತರಿಸಲಿ

ಕಾಂಡೋಮ್ ಬಳಕೆ ಮತ್ತು ವಿತರಣೆಯ ಮಹತ್ತರ ಜವಾಬ್ದಾರಿ ಹೊತ್ತ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ (ಕೆಸಾಪ್ಸ್) ಅಧಿಕಾರಿಗಳೇ ಖುದ್ದು ಕಾಂಡೋಮ್ ವಿತರಿಸಲಿ. ಕಚೇರಿಗಳಲ್ಲಿ ಕೂತು ಬಾಯಿಮಾತಿನಲ್ಲಿ ಏಡ್ಸ್ ನಿಯಂತ್ರಣ ಮಾಡುವುದಕ್ಕಿಂತ ಮನೆ ಮನೆಗೆ ಭೇಟಿ ನೀಡಿ ಪುರುಷರಿಗೆ ಕಾಂಡೋಮ್ ವಿತರಿಸಲಿ.

- ಮಾರುತಿ, ಚಿತ್ರದುರ್ಗ

ಹೆಣ್ಮಕ್ಕಳಿಗೆ ಸಮಾಜ ಕ್ರೂರ

ಅಪ್ರಾಪ್ತ ಹೆಣ್ಣು ಮಕ್ಕಳನ್ನು ಸುರಕ್ಷಿತ ಲೈಂಗಿಕತೆಯ ದಾಳವಾಗಿ ಬಳಸಿಕೊಂಡಿರುವ ಸಮಾಜ ನಿಜಕ್ಕೂ ಕ್ರೂರ. ಕಾಂಡೋಮ್ ಬಗ್ಗೆ ಅರಿವಿಲ್ಲದ ಅದೆಷ್ಟೋ ಮಂದಿ ಬಾಲಕಿಯರು ಕೂಪದಲ್ಲಿ ಸಿಲುಕಿದ್ದಾಗಿದೆ. ಇನ್ನಾದರೂ ಸರ್ಕಾರ ಅವರನ್ನು ರಕ್ಷಿಸಿ, ಅವರ ಜೀವ, ಜೀವನ ಉಳಿಸಬೇಕು.

- ಕಿಶೋರ್, ಶಿವಮೊಗ್ಗ

ಇದೇನಾ ಸಬಲೀಕರಣ?

ದೇಶದಲ್ಲಿ ಮಹಿಳಾ ರಕ್ಷಣೆ ಹಾಗೂ ಸಬಲೀಕರಣ ಕೇವಲ ನಾಯಕರ ಭಾಷಣಗಳಲ್ಲಿ ಮಾತ್ರ ಜೀವಂತ. ಏಡ್ಸ್ ನಿಯಂತ್ರಣ ಮಾಡುವ ಸರ್ಕಾರದ ಯೋಜನೆ ಒಳ್ಳೆಯದು. ಆದರೆ, ಮಧ್ಯವರ್ತಿಗಳಂತಿರುವ ಸರ್ಕಾರೇತರ ಸಂಸ್ಥೆಗಳು ಹೆಣ್ಣು ಮಕ್ಕಳ ದುರುಪಯೋಗ ಮಾಡಿಕೊಂಡಿವೆ.

- ಜ್ಯೋತಿ, ದಾವಣಗೆರೆ

ರಕ್ಷಣೆಗೆ ಹೆಣ್ಣೇ ಬಳಕೆ

ಉದ್ಯೋಗದ ನೆಪದಲ್ಲಿ ಕಾಂಡೋಮ್ ಹಂಚುವ ಕರಾಳ ದಂಧೆಯಲ್ಲಿ ಸಿಲುಕಿರುವವನ್ನು ಸರ್ಕಾರ ರಕ್ಷಿಸುವ ಕೆಲಸ ಮಾಡಲಿ. ಹೆಣ್ಣು ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ ನೀಡಲು ಸರ್ಕಾರ ಗಮನ ಹರಿಸಬೇಕು. ಕತ್ತಲಿನಿಂದ ಮುಗ್ಧರನ್ನು ಬೆಳಕಿನೆಡೆಗೆ ಕರೆತನ್ನಿ.

- ಅರವಿಂದ, ಚಿಕ್ಕಮಗಳೂರು

ಲೈಂಗಿಕ ಶಿಕ್ಷಣ ನೀಡಿ

ಪುಸ್ತಕ ಹಿಡಿದು ಬದುಕು ಕಟ್ಟಿಕೊಳ್ಳಬೇಕಾದ ಕೈಗಳಿಗೆ ಕಾಂಡೋಮ್ ಕೊಟ್ಟಿರುವ ವ್ಯವಸ್ಥೆಗೆ ನನ್ನ ಧಿಕ್ಕಾರ.ಹೆಣ್ಣು ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅಗತ್ಯವಿದೆ. ಅದರ ಭೀಕರತೆ ಮತ್ತು ಅಪಾಯದ ಕುರಿತು ಪ್ರತಿ ಹೆಣ್ಣಿನಲ್ಲೂಸಾಮಾನ್ಯ ಜ್ಞಾನ ಇರಬೇಕು.

- ದಿವ್ಯಾ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.