ಬೆಂಗಳೂರು: ಕರ್ನಾಟಕ ಏಕೀಕರಣ ಚಳವಳಿ, ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಬೀದರ್ ಜಿಲ್ಲೆಯ ಜಯದೇವಿ ತಾಯಿ ಲಿಗಾಡೆ ಮತ್ತು ಪ್ರಭುರಾವ ಕಂಬಳಿವಾಲೆ ಅವರ ಹೆಸರಿನಲ್ಲಿ ಟ್ರಸ್ಟ್ಗಳನ್ನು ರಚಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.

2025–26ನೇ ಸಾಲಿನಲ್ಲಿ ಹೊಸದಾಗಿ ರಚನೆಯಾಗುವ ಟ್ರಸ್ಟ್ಗಳಿಗೆ ನಿಗದಿ ಮಾಡಿರುವ ಮೊತ್ತದಲ್ಲಿ ಎರಡೂ ಟ್ರಸ್ಟ್ಗಳಿಗೆ ತಲಾ ₹35 ಲಕ್ಷ ನೀಡಲಾಗಿದೆ.

ನಾರಾಯಣ ಗುರು ನಿಗಮ ನೋಂದಣಿಗೆ ಆದೇಶ: ಈಡಿಗ–ಬಿಲ್ಲವ ಸೇರಿದಂತೆ 26 ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ‘ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ದ ನೋಂದಣಿ ಸೇರಿದಂತೆ ಆರಂಭಿಕ ವೆಚ್ಚವನ್ನು ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದಿಂದ ಭರಿಸಬೇಕು. ನಂತರ ವಾಪಸ್ ಪಡೆಯಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೂಚಿಸಿದೆ.

ನಿಗಮವನ್ನು ಕಂಪನಿ ಕಾಯ್ದೆಯ ನಿಯಮಗಳಂತೆ ನೋಂದಣಿ ಮಾಡಬೇಕು. ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡುವವರೆಗೆ ಕಾಡುಗೊಲ್ಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹೆಚ್ಚುವರಿ ಕಾರ್ಯಭಾರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.