ಗುರುವಾರ, 21 ಆಗಸ್ಟ್ 2025
×
ADVERTISEMENT
ADVERTISEMENT

ಪ್ರಧಾನಿ, ಸಿಎಂ, ಸಚಿವರ ಪದಚ್ಯುತಿಗೊಳಿಸುವ ಮಸೂದೆ: ಲೋಕಸಭೆಯಲ್ಲಿ ಕೋಲಾಹಲ

Published : 20 ಆಗಸ್ಟ್ 2025, 23:30 IST
Last Updated : 20 ಆಗಸ್ಟ್ 2025, 23:30 IST
ಫಾಲೋ ಮಾಡಿ
Comments
ಒಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಕಾನೂನಿನ ವ್ಯಾಪ್ತಿಗೆ ತರಲು ಸಾಂವಿಧಾನಿಕ ತಿದ್ದುಪಡಿ ತಂದಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ನೇತೃತ್ವದಲ್ಲಿ ಇಡೀ ವಿರೋಧ ಪಕ್ಷಗಳು ಸರ್ಕಾರಗಳನ್ನು ಜೈಲಿನಿಂದ ನಡೆಸಲು ಮತ್ತು ಅಧಿಕಾರಕ್ಕೆ ಅಂಟಿಕೊಂಡಿರಲು ಮಸೂದೆಗಳನ್ನು ವಿರೋಧಿಸಿವೆ.
– ಅಮಿತ್‌ ಶಾ, ಕೇಂದ್ರ ಗೃಹ ಸಚಿವ
ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರಂತಹ ಮಿತ್ರಪಕ್ಷಗಳ ನಾಯಕರಿಗೆ ಬೆದರಿಕೆ ಒಡ್ಡಲು ಗೃಹ ಸಚಿವರು ಈ ಅಪಾಯಕಾರಿ ಮಸೂದೆ ತಂದಿದ್ದಾರೆ. ಈ ಮಸೂದೆಯು ಸಾಂವಿಧಾನಿಕ ಒಕ್ಕೂಟ ತತ್ವಗಳ ಹೃದಯಭಾಗಕ್ಕೆ ದಾಳಿ ಮಾಡುತ್ತದೆ. ವಿರೋಧ ಪಕ್ಷಗಳ ಸರ್ಕಾರಗಳನ್ನು ಹಣಿಯುವ ದುರುದ್ದೇಶವೂ ಈ ಮಸೂದೆ ಹಿಂದಿದೆ.
– ಕೆ.ಸಿ.ವೇಣುಗೋಪಾಲ್‌, ಕಾಂಗ್ರೆಸ್‌ ಸಂಸದ
ಈ ಮಸೂದೆಗಳು ಸಂವಿಧಾನದ ಮೂಲ ಸ್ವರೂಪವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಮಸೂದೆಗಳು ಕ್ರಿಮಿನಲ್ ನ್ಯಾಯದ ನ್ಯಾಯಶಾಸ್ತ್ರಕ್ಕೆ ವಿರುದ್ಧವಾಗಿವೆ ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ವಿರೂಪಗೊಳಿಸುತ್ತವೆ. ಜತೆಗೆ, ರಾಜಕೀಯ ದುರುಪಯೋಗಕ್ಕೆ ಹೆಬ್ಬಾಗಿಲು ತೆರೆಯುತ್ತವೆ.
– ಮನೀಷ್‌ ತಿವಾರಿ, ಕಾಂಗ್ರೆಸ್‌ ಸಂಸದ
ಅನಗತ್ಯ ಆತುರ ತೋರಿ ಈ ಮಸೂದೆಗಳನ್ನು ಪರಿಚಯಿಸಲಾಗುತ್ತಿದೆ. ಸದನದ ಕಾರ್ಯವಿಧಾನಗಳ ಪ್ರಕಾರ ಈ ಮಸೂದೆಗಳನ್ನು ಮಂಡಿಸಿಲ್ಲ. ಮಸೂದೆಗಳ ಪ್ರತಿಗಳನ್ನು ಸದನದ ಸದಸ್ಯರಿಗೆ ಏಳು ದಿನ ಮುಂಚಿತವಾಗಿ ನೀಡಬೇಕಿತ್ತು.
– ಎನ್.ಕೆ.ಪ್ರೇಮಚಂದ್ರನ್‌, ಆರ್‌ಎಸ್‌ಪಿ ಸಂಸದ
ಈ ಸರ್ಕಾರ ಪೊಲೀಸ್ ರಾಜ್ಯ ರಚಿಸಲು ಮುಂದಾಗಿದೆ. ಇದು ಚುನಾಯಿತ ಸರ್ಕಾರಕ್ಕೆ ಮರಣದಂಡನೆಯಾಗುತ್ತದೆ. ಕ್ಷುಲ್ಲಕ ಆರೋಪಗಳು ಹಾಗೂ ಅನುಮಾನದ ಆಧಾರದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ನ್ಯಾಯಾಧೀಶರಂತೆ ಕಾರ್ಯನಿರ್ವಹಿಸಲು ಈ ಮಸೂದೆಗಳು ಅನುವು ಮಾಡಿಕೊಡುತ್ತವೆ.
– ಅಸಾದುದ್ದೀನ್ ಓವೈಸಿ, ಎಐಎಂಐಎಂ ಸಂಸದ
ನೀವು 30 ದಿನ ಜೈಲಿನಲ್ಲಿ ಇದ್ದರೆ ಸಚಿವರಾಗಿ ಮುಂದುವರಿಯಬಹುದೇ? ಇದು ಸಾಮಾನ್ಯ ಜ್ಞಾನ. ಇದರಲ್ಲಿ ನನಗೆ ಯಾವುದೇ ತಪ್ಪು ಕಾಣುತ್ತಿಲ್ಲ. ಮಸೂದೆಯನ್ನು ಪರಾಮರ್ಶೆಗೆ ಜೆಪಿಸಿಗೆ ಒಪ್ಪಿಸಿರುವುದು ಉತ್ತಮ ನಡೆ.
– ಶಶಿ ತರೂರ್‌, ಕಾಂಗ್ರೆಸ್‌ ಸಂಸದ (ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT