ಪಾಸ್‌ಪೋರ್ಟ್ ನಕಲಿ
‘ಬಾಂಬಾ ಫಾಂಟಾ ಎಂಬಾಕೆ ಅಡ್ನೊಯಿಸ್ ಜಾಬುಲಿಲೆ ಎಂಬ ನಕಲಿ ಹೆಸರಿನಲ್ಲಿ ಪಾಸ್‌ಪೋರ್ಟ್ ಪಡೆದು, ಬಿಜಿನೆಸ್ ವೀಸಾದಲ್ಲಿ 2020ರಲ್ಲಿ ಭಾರತಕ್ಕೆ ಬಂದಿದ್ದಳು. ಇಲ್ಲಿ ಫುಡ್ ಕಾರ್ಟ್ ವ್ಯವಹಾರ ನಡೆಸುತ್ತಿದ್ದಳು. ನವದೆಹಲಿಯ ನಾವ್ಡಾದ ಲಕ್ಷ್ಮೀವಿಹಾರ್‌ನಲ್ಲಿ ವಾಸವಿದ್ದಳು. ಒಲಿಜೊ ಇಯಾನ್ಸ್ ನವದೆಹಲಿಯ ಮಾಳವೀಯ ನಗರದಲ್ಲಿ ವಾಸವಿದ್ದಳು. ಈಕೆ ಮೆಡಿಕಲ್ ವೀಸಾದಲ್ಲಿ ಭಾರತಕ್ಕೆ 2016ರಲ್ಲಿ ಬಂದಿದ್ದು, ಬಳಿಕ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದಳು. ಇವರಿಬ್ಬರೂ ಮಾದಕ ವಸ್ತು ದಂಧೆಯ ಹಣದಿಂದ ಐಷಾರಾಮಿ ಜೀವನ ಸಾಗಿಸುತ್ತಿದ್ದರು’ ಎಂದು ಕಮಿಷನರ್ ತಿಳಿಸಿದರು.