ನವದೆಹಲಿ: ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮೂಲಕ ಕಳೆದ ಮೂವತ್ತು ವರ್ಷಗಳಲ್ಲಿ ಕೇರಳದಲ್ಲಿ ₹2,964 ಕೋಟಿ ಸಾಲ ನೀಡಿದ್ದರೆ, ರಾಜ್ಯದಲ್ಲಿ ಕೊಟ್ಟಿರುವುದು ₹138 ಕೋಟಿ ಮಾತ್ರ.

ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ರಾಯಚೂರು ಸಂಸದ ಜಿ.ಕುಮಾರ ನಾಯಕ ಪ್ರಶ್ನೆಗೆ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಕಿರಣ್ ರಿಜಿಜು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ. ನೆರೆಯ ತಮಿಳುನಾಡಿನಲ್ಲಿ ₹660 ಕೋಟಿ ಸಾಲ ಕೊಡಲಾಗಿದೆ.

ಕರ್ನಾಟಕದಲ್ಲಿ 96 ಲಕ್ಷ ಅಲ್ಪಸಂಖ್ಯಾತರು ವಾಸವಾಗಿದ್ದು, ಇದು ರಾಜ್ಯದ ಒಟ್ಟು ಜನಸಂಖ್ಯೆಯ ಶೇ 15.92. ರಾಜ್ಯಕ್ಕೆ ಕಳೆದ 30 ವರ್ಷಗಳಲ್ಲಿ ಕೇವಲ ₹3.73 ಕೋಟಿ ಮೈಕ್ರೋ ಸಾಲ ಮತ್ತು ₹134 ಕೋಟಿ ಟರ್ಮ್ ಲೋನ್ ಮಾತ್ರ ದೊರಕಿರುವುದು ಅಸಮರ್ಪಕ ಎಂದು ಕುಮಾರ ನಾಯಕ ದೂರಿದರು.

ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 680 ಜನರು ಮಾತ್ರ ಈ ಸಾಲ ಪಡೆದಿದ್ದಾರೆ. 2021–22ರಲ್ಲಿ ಸರಾಸರಿ ₹1 ಲಕ್ಷ ದೊರಕುತ್ತಿದ್ದರೆ, 2024–25ರಲ್ಲಿ ಅದು ₹70,000ಕ್ಕೆ ಇಳಿದಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.