ಬೆಂಗಳೂರು: ರಾಜ್ಯ ಅರಣ್ಯ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ ವಾರ್ಷಿಕ ವರದಿಯ ಪ್ರಕಾರ ರಾಜ್ಯದಲ್ಲಿ 900ಕ್ಕೂ ಹೆಚ್ಚು ಹೊಸ ಅರಣ್ಯ ಒತ್ತುವರಿ ಪ್ರಕರಣ ನಡೆದಿದ್ದು, ಇಲ್ಲಿವರೆಗೆ 1,22,201 ಪ್ರಕರಣಗಳು ದಾಖಲಾಗಿ 2,15,393.53 ಎಕರೆ ಅರಣ್ಯ ಪ್ರದೇಶ ಒತ್ತುವರಿ ಆಗಿದೆ.

312 ಪ್ರಕರಣಗಳೊಂದಿಗೆ ಧಾರವಾಡ ವೃತ್ತ ಪ್ರಥಮ ಸ್ಥಾನ ಪಡೆದಿದ್ದರೆ, 125 ಹೊಸ ಪ್ರಕರಣಗಳೊಂದಿಗೆ ಧಾರವಾರ ವೃತ್ತ ಎರಡನೇ ಸ್ಥಾನದಲ್ಲಿದೆ. 121 ಹಾಗೂ 103 ಹೊಸ ಪ್ರಕರಣಗಳೊಂದಿಗೆ ಶಿವಮೊಗ್ಗ ಹಾಗೂ ಕೆನರಾ ವೃತ್ತಗಳು ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನದಲ್ಲಿವೆ. ಆದರೆ ಇದೇ ವರದಿಯಲ್ಲಿ ರಾಜ್ಯದ ಯಾವುದೇ ಭಾಗದಲ್ಲೂ ಹೊಸ ಒತ್ತುವರಿ ಪ್ರಕರಣ ದಾಖಲಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.

ಕಳೆದ ವರ್ಷದ ಏಪ್ರಿಲ್ನಿಂದ ಡಿಸೆಂಬರ್ವರೆಗಿನ ಮಾಹಿತಿ ಆಧರಿಸಿದ ವಾರ್ಷಿಕ ವರದಿಗೂ ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿರುವ ಉತ್ತರಕ್ಕೂ ಭಾರಿ ವ್ಯತ್ಯಾಸವಿದೆ. ಖಂಡ್ರೆ ಅವರು ರಾಜ್ಯದಲ್ಲಿ 2,43,634 ಎಕರೆ ಅರಣ್ಯ ಪ್ರದೇಶ ಒತ್ತುವರಿ ಆಗಿದೆ ಎಂದು ಕಾಂಗ್ರೆಸ್ನ ರಿಜ್ವಾನ್ ಅರ್ಷದ್ ಅವರಿಗೆ ವಿಧಾನಸಭೆಯಲ್ಲಿ ಉತ್ತರಿಸಿದ್ದರು. ವಿಧಾನಸಭೆಯಲ್ಲಿ ನೀಡಿದ ಒತ್ತುವರಿ ಮಾಹಿತಿಗೂ ವಾರ್ಷಿಕ ವರದಿಗೂ ತಾಳೆಯಾಗುತ್ತಿಲ್ಲ.

ಕೇಂದ್ರದ ನಿರ್ದೇಶನ: ಅರಣ್ಯ ಒತ್ತುವರಿಯು ಗಂಭೀರ ಸಮಸ್ಯೆಯಾಗಿದ್ದು, ಅವನ್ನು ಆದ್ಯತೆಯ ಮೇಲೆ ತೆರವು ಮಾಡಬೇಕೆಂದು ಸುಪ್ರೀಂಕೋರ್ಟ್ ನವೆಂಬರ್ 2001ರಲ್ಲಿಯೇ ಆದೇಶಿಸಿತ್ತು. ಈ ಆದೇಶವನ್ನು ಇರಿಸಿಕೊಂಡು ಕೇಂದ್ರದ ಪರಿಸರ ಹಾಗೂ ಅರಣ್ಯ ಸಚಿವಾಲಯವು 2002 ರಲ್ಲೇ ಒತ್ತುವರಿ ತೆರವು ಪ್ರಕರಣಗಳನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸಲು ವೃತ್ತ ಮಟ್ಟದಲ್ಲಿ ಸಿಎಫ್ ನೇತೃತ್ವದಲ್ಲಿ ಡಿಸಿಎಫ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು ಮತ್ತು ಈ ಸಮಿತಿಯು ತ್ರೈಮಾಸಿಕವಾಗಿ ಸಭೆ ಸೇರಿ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿತ್ತು. ಅಲ್ಲದೇ, ಹೊಸದಾಗಿ ಅರಣ್ಯ ಒತ್ತುವರಿ ತಡೆಯಲು ವಿಫಲರಾದಲ್ಲಿ ಡಿಸಿಎಫ್, ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಪರಿಸರ ಸಚಿವಾಲಯ ಫೆಬ್ರುವರಿ 2004 ರಲ್ಲಿ ತಾಕೀತು ಮಾಡಿತ್ತು.

ಈ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರವು ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೇಂದ್ರ ಸ್ಥಾನದ ವಿಭಾಗೀಯ ಉಪ ಅರಣ್ಯಸಂರಕ್ಷಣಾಧಿಕಾರಿಗಳನ್ನು ಸದಸ್ಯ ಕಾರ್ಯದರ್ಶಿಯಾಗಿ ಹಾಗೂ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಿ ಜಿಲ್ಲಾ ಮಟ್ಟದ ಸಮಿತಿಗಳನ್ನು ಆಗಸ್ಟ್ 2002 ರಲ್ಲಿ ಆದೇಶ ಹೊರಡಿಸಿತ್ತು. ಈ ಸಮಿತಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಸೇರಿ ಒತ್ತುವರಿ ತೆರವಿಗೆ ಕ್ರಮ ತೆಗೆದುಕೊಂಡು ವರದಿಯನ್ನು ಅರಣ್ಯ ಇಲಾಖೆಗೆ ಸಲ್ಲಿಸಬೇಕು ಎಂದು ಆದೇಶ ಹೊರಡಿಸಿತ್ತು. ಆದರೆ ಕೆಲ ವಿಭಾಗದ ಸಿಎಫ್ಗಳು ಸಭೆಯನ್ನೇ ನಡೆಸಿಲ್ಲ ಎನ್ನುವುದು ಆರ್ಟಿಐನಿಂದ ಬಹಿರಂಗವಾಗಿದೆ.

ಧಾರವಾಡ ವೃತ್ತದಲ್ಲಿ 2020 ಏಪ್ರಿಲ್ನಿಂದ 2024 ಸೆಪ್ಟೆಂಬರ್ವರೆಗೆ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಒಂದೇ ಒಂದು ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆದಿಲ್ಲ. ಇನ್ನು ಕೆನರಾ ವೃತ್ತದಲ್ಲಿ ಕೇವಲ ಎರಡು ಸಭೆಗಳನ್ನು ನಡೆಸಲಾಗಿದೆ. ಬೆಳಗಾವಿ ವೃತ್ತದಲ್ಲಿ ಇಂತಹ ಸಭೆ ನಡೆದ ಬಗ್ಗೆ ಮಾಹಿತಿಯೇ ಇಲ್ಲವೆಂದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರಿಗೆ ಉತ್ತರಿಸಿದ್ದಾರೆ.

‘ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ, ಎಸ್ಪಿಗಳ ಜೊತೆ ಸಭೆಯೇ ನಡೆಯದಿದ್ದರೆ ಒತ್ತುವರಿ ತೆರವು ಹೇಗೆ ನಡೆಯುತ್ತದೆ. ಇಂತಹ ಸಿಸಿಎಫ್ಗಳ ವಿರುದ್ಧ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ಸುಪ್ರೀಂಕೋರ್ಟ್ನ ನಿರ್ದೇಶನವನ್ನು ಪಾಲಿಸದ ಈ ಅಧಿಕಾರಿಗಳಿಗೆ ಬಡ್ತಿ ತಡೆಹಿಡಿಯಬೇಕು ಹಾಗೂ ಈಗಿರುವ ಸ್ಥಳದಿಂದ ವರ್ಗಾವಣೆ ಮಾಡಿ ಸ್ಥಳ ತೋರಿಸಬಾರದು‘ ಎಂದು ಹೆಸರೇಳಲು ಬಯಸದ ಆರ್ಟಿಐ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಕೇಂದ್ರದ ನಿರ್ದೇಶನಕ್ಕೆ ಕ್ಯಾರೇ ಅನ್ನದ ರಾಜ್ಯ

ಹೊಸ ಒತ್ತುವರಿ ಪ್ರಕರಣಗಳ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪರಿಸರ ಕಾರ್ಯಕರ್ತರು ಹಲವು ದೂರು ಸಲ್ಲಿಸಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ಕ್ರಮವಾಗಿಲ್ಲ.

ಉದಾಹರಣೆಗೆ 2022-23 ನೇ ಸಾಲಿನಲ್ಲಿ 993 ಹೊಸ ಒತ್ತುವರಿ ಪ್ರಕರಣಗಳು ದಾಖಲಾಗಿದ್ದವು. ಅತೀ ಹೆಚ್ಚಿನ ಪ್ರಕರಣಗಳು ಬೆಂಗಳೂರು, ಬೆಳಗಾವಿ, ಹಾಸನ ಹಾಗೂ ಶಿವಮೊಗ್ಗ ವೃತ್ತಗಳಲ್ಲಿ ಕಂಡುಬಂದಿತ್ತು. ಒತ್ತುವರಿ ತಡೆಗಟ್ಟಲು ವಿಫಲರಾದ ಅರಣ್ಯಾಧಿಕಾಗಳ ವಿರುದ್ಧ ಕ್ರಮ ಜರುಗಿಸುವಂತೆ ಕೆಲ ಪರಿಸರವಾದಿಗಳು ಕೇಂದ್ರ ಸರ್ಕಾರಕ್ಕೆ ದೂರನ್ನು ನೀಡಿದ್ದರು. ದೂರಿನ ಕುರಿತು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಕಳೆದ ವರ್ಷದ ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರದ ಅರಣ್ಯ ಸಂರಕ್ಷಣಾ ವಿಭಾಗ ನಿರ್ದೇಶನ ನೀಡಿದೆ. ಆದರೆ ಒತ್ತುವರಿ ತೆರವು ಸಂಪೂರ್ಣವಾಗಲಿಲ್ಲ, ತಪ್ಪಿತಸ್ಥ ಅಧಿಕಾರಿಗಳನ್ನು ಅದೇ ಹುದ್ದೆಗಳಲ್ಲಿ ಮುಂದುವರೆಸಲಾಗಿದೆ.

ಬೆಳಗಾವಿ ಹಾಗೂ ಧಾರವಾಡ ಅರಣ್ಯ ವೃತ್ತಗಳಲ್ಲಿ ಹೊಸ ಒತ್ತುವರಿಗಳನ್ನು ತಡೆಗಟ್ಟಲು ವಿಫಲರಾದ ಸಿಸಿಎಫ್ ಹಾಗೂ ಇತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರನ್ನು ನೀಡಲಾಗಿತ್ತು. ದೂರಿನ ಕುರಿತು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರದ ಅರಣ್ಯ ಸಂರಕ್ಷಣಾ ವಿಭಾಗ ಕಳೆದ ವರ್ಷದ ಅಕ್ಟೋಬರ್ನಲ್ಲಿ ನಿರ್ದೇಶನ ನೀಡಿದೆ. ಕಾಳಿ ಹುಲಿ ಮೀಸಲು ಅರಣ್ಯದಲ್ಲಿ 2017 ರಿಂದ 2023 ರ ವರೆಗೆ ನಲವತ್ತಕ್ಕೂ ಹೆಚ್ಚು ಹೊಸ ಅರಣ್ಯ ಒತ್ತುವರಿ ಪ್ರಕರಣಗಳು ದಾಖಲಾಗಿದ್ದು ಸಿಸಿಎಫ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರನ್ನು ನೀಡಲಾಗಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರದ ಅರಣ್ಯ ಸಂರಕ್ಷಣಾ ವಿಭಾಗವು ಕಳೆದ ವರ್ಷದ ಆಗಸ್ಟ್ನಲ್ಲಿ ನಿರ್ದೇಶನ ನೀಡಿದೆ. ಆದರೆ ಈ ಪ್ರಕರಣಗಳಲ್ಲಿ ಯಾವುದೇ ಕ್ರಮವಾಗಿಲ್ಲ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ಇನ್ನು ಬಿಳಿಗಿರಿರಂಗನ ಬೆಟ್ಟದ ಹುಲಿ ಮೀಸಲಿನ ಸರ್ವೆ ಸಂಖ್ಯೆ 4 ರಲ್ಲಿ ಅರಣ್ಯ ಒತ್ತುವರಿ ಆಗಿರುವ ಕುರಿತ ದೂರಿನ ಮೇರೆಗೆ ಜಂಟಿ ಸರ್ವೇ ನಡೆಸುವಂತೆ ಉಪ ಲೋಕಾಯುಕ್ತರು ನೀಡಿದ ನಿರ್ದೇಶನ ನೀಡಿ ವರ್ಷಗಳೇ ಉರುಳಿದ್ದರೂ ಸರ್ವೇ ಪೂರ್ಣಗೊಂಡಿಲ್ಲ. ಸರ್ವೆಯನ್ನು ಶೀಘ್ರವೇ ಪೂರ್ಣಗೊಳಿಸಿ ಒತ್ತುವರಿ ತೆರವು ಮಾಡಬೇಕೆಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸೂಚಿಸಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.