ಬೆಂಗಳೂರು: ‘ಮದ್ಯದ ಅಂಗಡಿಗಳ ಉಪಗುತ್ತಿಗೆ ನೀಡುವಾಗ ಜನಪ್ರತಿನಿಧಿಗಳು ನೀಡುವ ಶಿಫಾರಸು ಆಧಾರಿಸಿ ಕಾರ್ಯನಿರ್ವಹಿಸುವುದಿಲ್ಲ’ ಎಂದು ಹೈಕೋರ್ಟ್‌ಗೆ ಎಂಎಸ್‌ಐಎಲ್(ಮೈಸೂರ್ ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್) ಅಫಿಡವಿಟ್ ಸಲ್ಲಿಸಿದೆ.

ಪಶುಸಂಗೋಪನಾ ಸಚಿವ ಪ್ರಭು ಬಿ. ಚೌವ್ಹಾಣ್ ನೀಡಿದ್ದ ಶಿಫಾರಸು ಪತ್ರದೊಂದಿಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಪೀಠ, ಅಫಿಡವಿಟ್ ಸಲ್ಲಿಸುವಂತೆ ಎಂಎಸ್‌ಐಎಲ್‌ಗೆ ನಿರ್ದೇಶನ ನೀಡಿತ್ತು.

‘ಜನಪ್ರತಿನಿಧಿಗಳ ಶಿಫಾರಸು ಅಥವಾ ಟಿಪ್ಪಣಿಗಳಿಗೆ ಪ್ರಭಾವಿತರಾಗುವುದಿಲ್ಲ. ಸ್ಥಳ ಪರಿಶೀಲನೆ ನಡೆಸಿ ಅಬಕಾರಿ ಕಾಯ್ದೆ ಪ್ರಕಾರ ವಸ್ತುನಿಷ್ಟವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಂಎಸ್‌ಐಲ್ ವ್ಯವಸ್ಥಾಪಕ ನಿರ್ದೇಶಕ ಎಚ್.ಪಿ. ಪ್ರಕಾಶ್ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಬೀದರ್ ಜಿಲ್ಲೆಯಸೋಮನಾಥ್ ಎಂಬುವರು ಪಿಐಎಲ್ ಸಲ್ಲಿಸಿ, ‘ವಿಧಾನಸಭಾ ಕ್ಷೇತ್ರವಾರುಎಂಎಸ್‌ಐಎಲ್ಮದ್ಯ ಮಳಿಗೆ ತೆರೆಯುವ ಸಂಬಂಧ ಅಬಕಾರಿ ಇಲಾಖೆ ಹೊರಡಿಸಿದ ಆದೇಶವು ಜನಪ್ರತಿನಿಧಿಗಳು ತಮ್ಮ ಬೆಂಬಲಿಗರಿಗೆ ಪರವಾನಗಿ ಕೊಡಿಸಲು ಅನುಕೂಲವಾಗುತ್ತಿದೆ’ ಎಂದು ದೂರಿದ್ದರು.‘ಅದು ಶಿಫಾರಸು ಅಲ್ಲ, ಮನವಿಯ ಟಿಪ್ಪಣಿ’ ಎಂದು ಸಚಿವರು ಅಫಿಡವಿಟ್ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.